Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ನೆಹೆಮೀಯ 10-11

10 ಮುದ್ರೆ ಹಾಕಿದ ಒಡಂಬಡಿಕೆಯಲ್ಲಿದ್ದ ಹೆಸರುಗಳು:

ರಾಜ್ಯಪಾಲನಾದ ನೆಹೆಮೀಯ, ಇವನು ಹಕಲ್ಯನ ಮಗನು. ಚಿದ್ಕೀಯ, ಸೆರಾಯ, ಅಜರ್ಯ, ಯೆರೆಮೀಯ, ಪಷ್ಹೂರ್, ಅಮರ್ಯ, ಮಲ್ಕೀಯ, ಹಟ್ಟೂಷ್, ಶೆಬನ್ಯ, ಮಲ್ಲೂಕ್, ಹಾರೀಮ್, ಮೆರೇಮೋತ್, ಓಬದ್ಯ, ದಾನಿಯೇಲ್, ಗಿನ್ನೆತೋನ್, ಬಾರೂಕ್, ಮೆಷುಲ್ಲಾಮ್, ಅಬೀಯ, ಮಿಯ್ಯಾಮೀನ್, ಮಾಜ್ಯ, ಬಿಲ್ಲೈ ಮತ್ತು ಶೆಮಾಯ ಈ ಎಲ್ಲಾ ಯಾಜಕರು ಮುದ್ರೆಹಾಕಿ ಒಡಂಬಡಿಕೆಯಲ್ಲಿ ಹೆಸರು ಬರೆಸಿದವರು.

ಲೇವಿಯರಲ್ಲಿ ಒಡಂಬಡಿಕೆಗೆ ಸಹಿ ಹಾಕಿದವರು:

ಅಜನ್ಯನ ಮಗನಾದ ಯೇಷೂವ, ಹೇನಾದಾದ್‌ನ ಸಂತತಿಯವನಾದ ಬಿನ್ನೂಯ್, 10 ಕದ್ಮೀಯೇಲ್ ಮತ್ತು ಅವನ ಸಹೋದರರಾದ ಶೆಬನ್ಯ, ಹೋದೀಯ, ಕೆಲೀಟ, ಪೆಲಾಯ ಮತ್ತು ಹಾನಾನ್; 11-12 ಮೀಕ, ರೆಹೋಬ್, ಹಷಬ್ಯ ಜಕ್ಕೂರ್, ಶೇರೇಬ್ಯ, ಶೆಬನ್ಯ, 13 ಹೋದೀಯ, ಬಾನೀ ಮತ್ತು ಬೆನೀನೂ.

14 ಒಡಂಬಡಿಕೆಗೆ ಸಹಿ ಹಾಕಿದ ನಾಯಕರುಗಳು:

ಪರೋಷ್, ಪಹತ್‌ಮೋವಾಬ್, ಏಲಾಮ್, ಜತ್ತೂ, ಬಾನೀ, 15 ಬುನ್ನೀ, ಅಜ್ಗಾದ್, ಬೇಬೈ, 16 ಅದೋನೀಯ, ಬಿಗ್ವೈ, ಆದೀನ್, 17 ಆಟೇರ್, ಹಿಜ್ಕೀಯ, ಆಜ್ಜೂರ್, 18 ಹೋದೀಯ, ಹಾಷುಮ್, ಬೇಚೈ, 19 ಹಾರೀಫ್, ಅನಾತೋತ್, ನೇಬೈ, 20 ಮಗ್ಪೀಯಾಷ್, ಮೆಷುಲ್ಲಾಮ್, ಹೇಜೀರ್, 21 ಮೆಷೇಜಬೇಲ್, ಚಾದೋಕ್, ಯದ್ದೂವ, 22 ಪೆಲಟ್ಯ, ಹಾನಾನ್, ಅನಾಯ, 23 ಹೋಷೇಯ, ಹನನ್ಯ, ಹಷ್ಷೂಬ್, 24 ಹಲೋಹೇಷ, ಪಿಲ್ಹ, ಶೋಬೇಕ್, 25 ರೆಹೂಮ್, ಹಷಬ್ನ, ಮಾಸೇಯ, 26 ಅಹೀಯ, ಹಾನಾನ್, ಅನಾನ್, 27 ಮಲ್ಲೂಕ್, ಹಾರಿಮ್ ಮತ್ತು ಬಾನ.

28-29 ಹೀಗೆ ಇವರೆಲ್ಲಾ ಯೆಹೋವನಿಗೆ ಒಂದು ವಿಶೇಷವಾದ ವಾಗ್ದಾನವನ್ನು ಮಾಡಿದರು. ತಾವು ವಾಗ್ದಾನವನ್ನು ನೆರವೇರಿಸದೆ ಹೋದಲ್ಲಿ ಸಂಕಟಬಾಧೆಗಳು ಪ್ರಾಪ್ತವಾಗುವಂತೆ ಯೆಹೋವನನ್ನು ಕೇಳಿಕೊಂಡರು. ಇವರೆಲ್ಲಾ ದೇವರ ನೀತಿನಿಯಮಗಳನ್ನು ಅನುಸರಿಸುತ್ತೇವೆಂದು ಮಾತುಕೊಟ್ಟರು. ಆ ನೀತಿನಿಯಮಗಳನ್ನು ಯೆಹೋವನು ತನ್ನ ಸೇವಕನಾದ ಮೋಶೆಯ ಮೂಲಕ ನಮಗೆ ಕೊಟ್ಟನು. ಮೇಲೆ ಕಾಣಿಸಿದ ಹೆಸರುಗಳಲ್ಲದೆ ಉಳಿದ ಜನರು, ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ದೇವಾಲಯದ ಸೇವಕರು ಮತ್ತು ಇಸ್ರೇಲಿನ ಜನರು ತಮ್ಮ ಸುತ್ತಲು ವಾಸಿಸುವ ಜನರಿಂದ ಪ್ರತ್ಯೇಕಿಸಲ್ಪಟ್ಟರು. ದೇವರ ವಿಧಿನಿಯಮಗಳನ್ನು ಅನುಸರಿಸುವುದಕ್ಕಾಗಿ ತಮ್ಮ ಹೆಂಡತಿ ಮಕ್ಕಳೊಂದಿಗೆ ಪ್ರತ್ಯೇಕಿಸಿಕೊಂಡರು. ದೇವರಿಗೆ ಮಾಡಿದ ಒಡಂಬಡಿಕೆಯನ್ನು ನಡೆಸಿಕೊಡಲು ಒಪ್ಪಿದರು ಮತ್ತು ಹಾಗೆ ಮಾಡದಿದ್ದಲ್ಲಿ ದೇವರಿಂದ ಸಂಕಟ ವ್ಯಾಧಿಗಳನ್ನು ಸ್ವೀಕರಿಸಲೂ ಒಪ್ಪಿದರು.

30 “ನಮ್ಮ ಗಂಡು ಮತ್ತು ಹೆಣ್ಣುಮಕ್ಕಳು ನಮ್ಮ ಸುತ್ತಲಿರುವ ಅನ್ಯರನ್ನು ಮದುವೆಯಾಗಲು ಬಿಡುವುದಿಲ್ಲ” ಎಂದು ಪ್ರತಿಜ್ಞೆ ಮಾಡಿದರು.

31 “ಸಬ್ಬತ್ ದಿನದಲ್ಲಿ ಯಾವ ಕೆಲಸವನ್ನೂ ಮಾಡುವುದಿಲ್ಲವೆಂದು ಪ್ರಮಾಣಮಾಡುತ್ತೇವೆ. ನಮ್ಮ ಸುತ್ತಮುತ್ತಲಿನ ಜನರು ಸಬ್ಬತ್ ದಿನದಲ್ಲಿ ಮಾರಲು ದವಸಧಾನ್ಯವನ್ನಾಗಲಿ ಬೇರೆ ವಸ್ತುಗಳನ್ನಾಗಲಿ ತಂದರೆ ನಾವು ಸಬ್ಬತ್ ದಿನದಲ್ಲಿ ಮತ್ತು ಇತರ ಯಾವುದೇ ಹಬ್ಬದ ದಿನದಲ್ಲಿ ಅವುಗಳನ್ನು ಕೊಂಡುಕೊಳ್ಳುವುದಿಲ್ಲ. ಪ್ರತಿ ಏಳನೆಯ ವರ್ಷ ನಾವು ನೆಡುವುದೂ ಇಲ್ಲ. ಹೊಲದಲ್ಲಿ ಕೆಲಸ ಮಾಡುವುದೂ ಇಲ್ಲ. ನಮಗೆ ಬೇರೆಯವರು ಕೊಡಬೇಕಾಗಿರುವ ಸಾಲವನ್ನು ಏಳನೆಯ ವರ್ಷದಲ್ಲಿ ವಜಾ ಮಾಡುತ್ತೇವೆ.

32 “ದೇವಾಲಯವನ್ನು ನಡಿಸುವ ಖರ್ಚಿನ ಜವಾಬ್ದಾರಿಕೆಯನ್ನು ನಾವು ಹೊರುತ್ತೇವೆ. ನಾವು ಒಂದು ಬೆಳ್ಳಿನಾಣ್ಯವನ್ನು ಪ್ರತಿವರ್ಷ ನಮ್ಮ ದೇವರಿಗೆ ಕಾಣಿಕೆ ಕೊಡುತ್ತೇವೆ. ಇದು ದೇವಾಲಯದ ಕೆಲಸಕಾರ್ಯಗಳಿಗೆ ಉಪಯೋಗಿಲ್ಪಡಬೇಕು. 33 ಪ್ರತಿದಿನ ದೇವಾಲಯದೊಳಗೆ ಮೇಜಿನ ಮೇಲೆ ಇಡುವ ರೊಟ್ಟಿಗಳಿಗಾಗಿಯೂ ದಿನನಿತ್ಯದ ಸರ್ವಾಂಗಹೋಮಗಳಿಗೂ ಧಾನ್ಯಸರ್ಮರ್ಪಣೆಗೂ ಈ ಹಣವನ್ನು ಉಪಯೋಗಿಸಿರಿ. ಅಮಾವಾಸ್ಯೆ, ಸಬ್ಬತ್ ಮತ್ತು ಇತರ ವಿಶೇಷ ಸಭಾಕೂಟಗಳಲ್ಲಿ ಮಾಡುವ ಯಜ್ಞಗಳಿಗಾಗಿ ಈ ಹಣವನ್ನು ಉಪಯೋಗಿಸಿರಿ. ಇಸ್ರೇಲರನ್ನು ಶುದ್ಧರನ್ನಾಗಿ ಮಾಡುವ ಪವಿತ್ರ ಯಜ್ಞಗಳಿಗಾಗಿ ಮತ್ತು ಪಾಪಪರಿಹಾರಕ ಯಜ್ಞಗಳಿಗಾಗಿ ಈ ಹಣವನ್ನು ಉಪಯೋಗಿಸಿರಿ. ನಮ್ಮ ದೇವರ ಆಲಯದ ಯಾವ ಕಾರ್ಯಗಳಿಗೆ ಬೇಕಾದರೂ ಈ ಹಣವನ್ನು ಉಪಯೋಗಿಸಿರಿ.

34 “ನಾವು ಅಂದರೆ ಯಾಜಕರು, ಲೇವಿಯರು ಮತ್ತು ಇತರ ಜನರು ಒಟ್ಟಾಗಿ ಸೇರಿ ದೇವಾಲಯದಲ್ಲಿ ಯಜ್ಞ ಹೋಮಗಳನ್ನರ್ಪಿಸುವುದಕ್ಕೆ ಬೇಕಾದ ಕಟ್ಟಿಗೆಯನ್ನು ಪ್ರತಿಯೊಂದು ಕುಟುಂಬವು ವರ್ಷಕ್ಕೊಮ್ಮೆ ತಮಗೆ ನಿಗದಿತವಾದ ಸಮಯದಲ್ಲಿ ತಂದು ಒದಗಿಸುವುದಕ್ಕೆ ಚೀಟು ಹಾಕಿದೆವು. ಧರ್ಮಶಾಸ್ತ್ರದಲ್ಲಿ ಬರೆದಂತೆಯೇ ನಾವು ಮಾಡಬೇಕಲ್ಲಾ!

35 “ನಮ್ಮ ಬೆಳೆಗಳಲ್ಲಿ ಮತ್ತು ಹಣ್ಣಿನ ಮರಗಳಲ್ಲಿ ಬೆಳೆದ ಪ್ರಥಮ ಫಲಗಳನ್ನೆಲ್ಲಾ ಪ್ರತಿವರ್ಷ ದೇವಾಲಯಕ್ಕೆ ತಂದು ಅರ್ಪಿಸುವುದಕ್ಕೆ ಒಪ್ಪಿಕೊಂಡೆವು.

36 “ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ನಾವು ನಮ್ಮ ಚೊಚ್ಚಲು ಮಕ್ಕಳನ್ನು, ಚೊಚ್ಚಲು ದನ, ಕುರಿ, ಆಡುಗಳನ್ನು ದೇವಾಲಯದಲ್ಲಿ ಸೇವೆಮಾಡುತ್ತಿರುವ ಯಾಜಕರಿಗೆ ಒಪ್ಪಿಸುವೆವು.

37 “ಪ್ರಥಮ ಫಲದ ಹಿಟ್ಟನ್ನು, ಪ್ರಥಮ ಫಲದ ಹಣ್ಣುಗಳನ್ನು, ಹೊಸ ದ್ರಾಕ್ಷಾರಸವನ್ನು, ಹೊಸ ಎಣ್ಣೆಯನ್ನು ಯಾಜಕರಿಗೋಸ್ಕರವಾಗಿ ದೇವಾಲಯದ ಉಗ್ರಾಣಗಳಲ್ಲಿ ತಂದಿಡುವೆವು. ನಮ್ಮ ಬೆಳೆಗಳಲ್ಲಿ ಹತ್ತನೆಯ ಒಂದು ಭಾಗವನ್ನು ಲೇವಿಯರಿಗೆ ತಂದುಕೊಡುವೆವು. ನಾವು ಕೆಲಸ ಮಾಡುತ್ತಿರುವ ಊರುಗಳಿಂದ ಲೇವಿಯರು ಇವುಗಳನ್ನು ತೆಗೆದುಕೊಳ್ಳಬೇಕು. 38 ನಮ್ಮಿಂದ ಆ ಕಾಣಿಕೆಗಳನ್ನು ಅವರು ಸ್ವೀಕರಿಸುವಾಗ ಆರೋನನ ವಂಶದವರಾದ ಯಾಜಕನೊಬ್ಬನು ಅವರ ಜೊತೆಯಲ್ಲಿ ಇರಬೇಕು. ಲೇವಿಯರು ಆ ಕಾಣಿಕೆಗಳನ್ನು ದೇವಾಲಯಕ್ಕೆ ತಂದು ಅದರ ಉಗ್ರಾಣಗಳಲ್ಲಿ ಶೇಖರಿಸಿಡಬೇಕು. 39 ಇಸ್ರೇಲ್ ಜನರು ಮತ್ತು ಲೇವಿಯರು ತಮ್ಮ ಕಾಣಿಕೆಗಳಾದ ದವಸಧಾನ್ಯ, ಹೊಸ ದ್ರಾಕ್ಷಾರಸ, ಎಣ್ಣೆ ಇವುಗಳನ್ನು ತಂದು ದೇವಾಲಯದ ಉಗ್ರಾಣಗಳಲ್ಲಿ ಇಡಬೇಕು. ದೇವಾಲಯಕ್ಕೋಸ್ಕರ ಮೀಸಲಾದ ಎಲ್ಲಾ ವಸ್ತುಗಳನ್ನು ಆ ಉಗ್ರಾಣಗಳಲ್ಲಿ ಇಡಬೇಕು. ಕೆಲಸದಲ್ಲಿ ನಿರತರಾಗಿರುವ ಯಾಜಕರು, ಗಾಯಕರು, ದ್ವಾರಪಾಲಕರು ಅಲ್ಲೇ ಇರಬೇಕು.

“ನಮ್ಮ ದೇವರ ಆಲಯವನ್ನು ನಾವು ನೋಡಿಕೊಳ್ಳುವುದಾಗಿ ನಾವೆಲ್ಲರೂ ಪ್ರಮಾಣಮಾಡುತ್ತೇವೆ!”

ಜೆರುಸಲೇಮಿನಲ್ಲಿ ವಾಸಿಸಲು ಹೊಸದಾಗಿ ಬಂದವರು

11 ಇಸ್ರೇಲರ ನಾಯಕರುಗಳು ಜೆರುಸಲೇಮ್ ನಗರದೊಳಗೆ ಬಂದು ನೆಲೆಸಿದ್ದರು. ಬೇರೆ ಯಾರು ಪಟ್ಟಣದೊಳಗೆ ನೆಲೆಸಬಹುದೆಂಬುದನ್ನು ಉಳಿದ ಇಸ್ರೇಲರು ತೀರ್ಮಾನ ಮಾಡಬೇಕಿತ್ತು. ಆದ್ದರಿಂದ ಚೀಟು ಹಾಕಿದರು. ಹತ್ತು ಮಂದಿಯಲ್ಲಿ ಒಬ್ಬನು ಪರಿಶುದ್ಧ ನಗರವಾದ ಜೆರುಸಲೇಮಿನಲ್ಲಿ ವಾಸಿಸಬೇಕೆಂದೂ ಉಳಿದ ಒಂಭತ್ತು ಮಂದಿ ತಮ್ಮ ಸ್ವಂತ ಊರುಗಳಲ್ಲಿ ವಾಸಿಸಬಹುದೆಂದೂ ಇದರಿಂದ ತಿಳಿದುಬಂತು. ಕೆಲವರು ಜೆರುಸಲೇಮಿನಲ್ಲಿ ವಾಸಿಸುವುದಕ್ಕೆ ತಾವೇ ಮುಂದೆ ಬಂದರು. ಉಳಿದವರು ತಾವಾಗಿಯೇ ಮುಂದೆ ಬಂದವರನ್ನು ವಂದಿಸಿ ಆಶೀರ್ವದಿಸಿದರು.

ಜೆರುಸಲೇಮಿನಲ್ಲಿ ವಾಸಿಸಿದ ಪ್ರಾಂತ್ಯಾಧಿಕಾರಿಗಳ ಪಟ್ಟಿ, (ಕೆಲವು ಇಸ್ರೇಲ್ ಜನರು, ಯಾಜಕರು, ಲೇವಿಯರು, ಆಲಯದ ಸೇವಕರು ಮತ್ತು ಸೊಲೊಮೋನನ ಸೇವಕರ ಸಂತಾನದವರು ಯೆಹೂದ ಪ್ರಾಂತ್ಯದ ಊರುಗಳಲ್ಲಿ ವಾಸಿಸಿದರು. ಇವರೆಲ್ಲರು ತಮ್ಮ ಊರುಗಳಲ್ಲಿದ್ದ ತಮ್ಮ ಸ್ವಂತ ಸ್ಥಳಗಳಲ್ಲಿ ಜೀವಿಸಿದರು. ಯೆಹೂದ ಮತ್ತು ಬೆನ್ಯಾಮೀನನ ಕುಟುಂಬಗಳ ಇತರರು ಜೆರುಸಲೇಮ್ ನಗರದಲ್ಲಿ ವಾಸಿಸಿದರು.)

ಜೆರುಸಲೇಮಿಗೆ ಬಂದ ಯೆಹೂದನ ಸಂತಾನದವರು ಯಾರೆಂದರೆ:

ಉಜ್ಜೀಯನ ಮಗನಾದ ಅತಾಯ. (ಉಜ್ಜೀಯನು ಜೆಕರ್ಯನ ಮಗ; ಜೆಕರ್ಯನು ಅಮರ್ಯನ ಮಗ; ಅಮರ್ಯನು ಶೆಫಟ್ಯನ ಮಗ; ಶೆಫಟ್ಯನು ಮಹಲಲೇಲನ ಮಗ; ಮಹಲಲೇಲ ಪೆರೆಚನ ಸಂತಾನದವನು.) ಇನ್ನೊಬ್ಬನು ಬಾರೂಕನ ಮಗನಾದ ಮಾಸೇಯ. (ಬಾರೂಕನು ಕೊಲ್ಹೋಜೆಯ ಮಗನು; ಕೊಲ್ಹೋಜೆಯು ಹಜಾಯನ ಮಗ; ಹಜಾಯನು ಅದಾಯನ ಮಗ; ಅದಾಯನು ಯೋಯಾರೀಬನ ಮಗ; ಯೋಯಾರೀಬನು ಜೆಕರ್ಯನ ಮಗ; ಜೆಕರ್ಯ ಶೇಲಹನ ಸಂತಾನದವನು). ಪೆರೆಚನ ಸಂತಾನಕ್ಕೆ ಒಟ್ಟು ನಾನೂರ ಅರವತ್ತೆಂಟು ಮಂದಿ ಜೆರುಸಲೇಮ್ ನಗರದಲ್ಲಿ ವಾಸಿಸಿದರು. ಇವರೆಲ್ಲಾ ಧೈರ್ಯಶಾಲಿಗಳಾದ ವೀರರು.

ಜೆರುಸಲೇಮಿಗೆ ವಾಸಿಸಲು ಬಂದ ಬೆನ್ಯಾಮೀನನ ಸಂತಾನದವರು ಯಾರೆಂದರೆ:

ಮೆಷುಲ್ಲಾಮನ ಮಗನಾದ ಸಲ್ಲು, (ಮೆಷುಲ್ಲಾಮನು ಯೋವೇದನ ಮಗ; ಯೋವೇದನು ಪೆದಾಯನ ಮಗ; ಪೆದಾಯನು ಕೋಲಾಯನ ಮಗ; ಕೋಲಾಯನು ಮಾಸೇಯ ಮಗ; ಮಾಸೇಯು ಈತಿಯೇಲನ ಮಗ; ಈತಿಯೇಲನು ಯೆಶಾಯನ ಮಗ). ಗಬ್ಬೈ ಮತ್ತು ಸಲ್ಲು ಎಂಬುವರು ಯೆಶಾಯನನ್ನು ಹಿಂಬಾಲಿಸಿದರು. ಹೀಗೆ ಒಟ್ಟು ಒಂಭೈನೂರ ಇಪ್ಪತ್ತೆಂಟು ಮಂದಿ. ಜಿಕ್ರಿಯ ಮಗನಾದ ಯೋವೇಲನು ಅವರಿಗೆ ಮುಖ್ಯಸ್ತನಾಗಿದ್ದನು. ಹಸ್ಸೆನೂವನ ಮಗನಾದ ಯೆಹೂದನು ಜೆರುಸಲೇಮಿನ ಎರಡನೆ ಜಿಲ್ಲೆಗೆ ಮುಖ್ಯಸ್ತನಾಗಿದ್ದನು.

10 ಜೆರುಸಲೇಮಿನೊಳಗೆ ವಾಸಿಸಲು ಬಂದ ಯಾಜಕರು ಯಾರೆಂದರೆ:

ಯೋಯಾರೀಬನ ಮಗನಾದ ಯೆದಾಯ, ಯಾಕೀನ್, 11 ಮತ್ತು ಹಿಲ್ಕೀಯನ ಮಗನಾದ ಸೆರಾಯ. (ಹಿಲ್ಕೀಯನು ಮೆಷುಲ್ಲಾಮನ ಮಗನು; ಮೆಷುಲ್ಲಾಮನು ಚಾದೋಕನ ಮಗನು; ಚಾದೋಕನು ಮೆರಾಯೋತನ ಮಗನು; ಮೆರಾಯೋತನು ದೇವಾಲಯದ ಮೇಲ್ವಿಚಾರಕನಾಗಿದ್ದ ಅಹೀಟೂಬನ ಸಂತಾನಕ್ಕೆ ಸೇರಿದವನು.) 12 ದೇವಾಲಯದೊಳಗೆ ಸೇವೆಮಾಡುವ ಎಂಟುನೂರ ಇಪ್ಪತ್ತೆರಡು ಮಂದಿ ಮತ್ತು ಯೆರೋಹಾಮನ ಮಗನಾದ ಅದಾಯ. ಯೆರೋಹಾಮನು ಪೆಲಲ್ಯನ ಮಗ; ಪೆಲಲ್ಯನು ಅಮ್ಚೀಯ ಮಗ; ಅಮ್ಚೀಯು ಜೆಕರ್ಯನ ಮಗ; ಜೆಕರ್ಯನು ಪಷ್ಹೂರನ ಮಗ; ಪಷ್ಹೂರನು ಮಲ್ಕೀಯನ ಮಗ. 13 ಮಲ್ಕೀಯನ ವಂಶದ ಒಟ್ಟು ಜನರು ಇನ್ನೂರ ನಲವತ್ತೆರಡು ಮಂದಿ. ಇವರೆಲ್ಲಾ ಕುಟುಂಬಗಳ ನಾಯಕರಾಗಿದ್ದರು. ಅಜರೇಲನ ಮಗನು ಅಮಷ್ಪೈ; (ಅಜರೇಲನು ಅಹಜೈಯ ಮಗ; ಅಹಜೈಯು ಮೆಪಿಲ್ಲೇಮೋತನ ಮಗ; ಮೆಪಿಲ್ಲೇಮೋತನು ಇಮ್ಮೇರನ ಮಗ.) 14 ಈ ವಂಶದವರ ಒಟ್ಟು ಸಂಖ್ಯೆ ನೂರ ಇಪ್ಪತ್ತೆಂಟು ಮಂದಿ. (ಇವರೆಲ್ಲಾ ಧೈರ್ಯಶಾಲಿಗಳಾದ ಯುದ್ಧ ಯೋಧರು. ಇವರ ಮುಖ್ಯಸ್ಥನು ಹಗ್ಗೆದೋಲೀಮನ ಮಗನಾದ ಜಬ್ದೀಯೇಲ.)

15 ಜೆರುಸಲೇಮಿಗೆ ವಾಸಿಸಲು ಬಂದ ಲೇವಿಯರು

ಹಷ್ಷೂಬನ ಮಗನಾದ ಶೆಮಾಯ; (ಹಷ್ಷೂಬನು ಅಜ್ರೀಕಾಮನ ಮಗ; ಅಜ್ರೀಕಾಮನು ಹಷಬ್ಯನ ಮಗ; ಹಷಬ್ಯನು ಬುನ್ನೀಯ ಮಗ.) 16 ಶಬ್ಬೆತೈ ಮತ್ತು ಯೋಜಾಬಾದ್. (ಇವರಿಬ್ಬರೂ ಲೇವಿಯರ ನಾಯಕರು. ಇವರು ದೇವಾಲಯದ ಹೊರಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು.) 17 ಮತ್ತನ್ಯ, (ಮತ್ತನ್ಯನು ಮೀಕನ ಮಗ; ಮೀಕನು ಜಬ್ದೀಯ ಮಗ; ಜಬ್ದೀಯು ಆಸಾಫನ ಮಗ. ಆಸಾಫನು ಗಾಯಕರ ನಾಯಕನಾಗಿದ್ದು ಪ್ರಾರ್ಥನೆ ಮತ್ತು ಸ್ತುತಿಗೀತೆಗಳಲ್ಲಿ ಜನರನ್ನು ನಡೆಸುತ್ತಿದ್ದನು.) ಬಕ್ಬುಕ್ಯ (ಇವನು ತನ್ನ ಸಹೋದರರಲ್ಲಿ ಎರಡನೆ ಸ್ಥಾನ ಪಡೆದಿದ್ದನು), ಮತ್ತು ಶಮ್ಮೂವನ ಮಗನಾದ ಅಬ್ದ, (ಶಮ್ಮೂವನು ಗಾಲಾಲನ ಮಗ; ಗಾಲಾಲನು ಯೆದೂತೂನನ ಮಗ). 18 ಹೀಗೆ ಒಟ್ಟು ಇನ್ನೂರ ಎಂಭತ್ತ ನಾಲ್ಕು ಮಂದಿ ಲೇವಿಯರು ಪರಿಶುದ್ಧ ನಗರದಲ್ಲಿ ವಾಸಿಸಲು ಬಂದರು.

19 ದ್ವಾರಪಾಲಕರಲ್ಲಿ:

ಅಕ್ಕೂಬ್, ಟಲ್ಮೋನ್ ಮತ್ತು ಅವರ ನೂರ ಎಪ್ಪತ್ತೆರಡು ಮಂದಿ ಸಹೋದರರು. ಅವರು ನಗರದ ಬಾಗಿಲುಗಳನ್ನು ಕಾವಲು ಕಾಯುವವರಾಗಿದ್ದರು.

20 ಉಳಿದ ಜನರೂ ಯಾಜಕರೂ ಮತ್ತು ಲೇವಿಯರೂ ಯೆಹೂದದ ಬೇರೆಬೇರೆ ಊರು ಪಟ್ಟಣಗಳಲ್ಲಿ ವಾಸಿಸಿದರು. ತಮ್ಮತಮ್ಮ ಪೂರ್ವಿಕರು ನೆಲೆಸಿದ ಸ್ಥಳಗಳಲ್ಲಿಯೇ ನೆಲೆಸಿದರು. 21 ಓಪೇಲ್ ಬೆಟ್ಟದಲ್ಲಿ ದೇವಾಲಯದ ಸೇವಕರು ವಾಸಿಸಿದರು. ಚೀಹ ಮತ್ತು ಗಿಷ್ಪ ಅವರ ಮುಖ್ಯಸ್ತರು.

22 ಮೀಕ ವಂಶಕ್ಕೆ ಸೇರಿದ ಉಜ್ಜೀಯು ಜೆರುಸಲೇಮಿನಲ್ಲಿ ಲೇವಿಯರಿಗೆಲ್ಲಾ ಮುಖ್ಯಸ್ಥನಾಗಿದ್ದನು. ಉಜ್ಜೀಯು ಬಾನೀಯ ಮಗ. (ಬಾನೀಯು ಹಷಬ್ಯನ ಮಗ; ಹಷಬ್ಯನು ಮತ್ತನ್ಯನ ಮಗ; ಮತ್ತನ್ಯನು ಮೀಕನ ಮಗ.) ಉಜ್ಜೀಯು ಆಸಾಫನ ಸಂತಾನಕ್ಕೆ ಸೇರಿದವನಾಗಿದ್ದನು. 23 ಗಾಯಕರಾಗಿದ್ದ ಇವರು ದೇವಾಲಯದ ಸೇವಾಕಾರ್ಯಗಳಲ್ಲಿ ಹಾಡುತ್ತಿದ್ದರು. ಇವರ ಅನುದಿನದ ಕರ್ತವ್ಯವನ್ನು ರಾಜನೇ ತಿಳಿಸುತ್ತಿದ್ದನು. ಇವರು ಅದಕ್ಕೆ ವಿಧೇಯರಾಗುತ್ತಿದ್ದರು. 24 ಪೆತಹ್ಯನು ಪ್ರಜೆಗಳ ವಿಷಯದಲ್ಲಿ ರಾಜನ ಪ್ರತಿನಿಧಿಯಾಗಿದ್ದನು. (ಪೆತಹ್ಯನು ಮೆಷೇಜಬೇಲನ ಮಗ; ಮೆಷೇಜಬೇಲನು ಜೆರಹನ ಮಗ; ಜೆರಹನು ಯೆಹೂದನ ಮಗ.)

25 ಯೆಹೂದ ಸಂಸ್ಥಾನದ ಜನರು ಈ ಪಟ್ಟಣಗಳಲ್ಲಿ ವಾಸಿಸಿದರು. ಕಿರ್ಯತರ್ಬ ಮತ್ತು ಸುತ್ತಮುತ್ತಲಿರುವ ಚಿಕ್ಕ ಪಟ್ಟಣಗಳಲ್ಲಿ, ದೀಬೋನ್ ಮತ್ತು ಅದರ ಸುತ್ತಲಿರುವ ಚಿಕ್ಕ ಪಟ್ಟಣಗಳಲ್ಲಿ, ಯಕಬ್ಜೆಯೇಲ್ ಮತ್ತು ಅದರ ಸುತ್ತಲಿದ್ದ ಚಿಕ್ಕ ಪಟ್ಟಣಗಳಲ್ಲಿ ವಾಸಿಸಿದರು. 26 ಅನಂತರ ಯೇಷೂವ, ಮೋಲಾದ, ಬೇತ್ಪಲೆಟ್, 27 ಹಚರ್ಷೂವಲ್, ಬೇರ್ಷೆಬ, ಅದರ ಸುತ್ತಲೂ ಇದ್ದ ಚಿಕ್ಕ ಪಟ್ಟಣಗಳಲ್ಲಿ, 28 ಚಿಕ್ಲಗ್, ಮೆಕೋನ ಮತ್ತು ಸುತ್ತಲಿದ್ದ ಚಿಕ್ಕ ಪಟ್ಟಣಗಳು, 29 ಏನ್ರಿಮ್ಮೋನ್, ಚೊರ್ರ, ಯರ್ಮೂತ್, 30 ಜನೋಹ, ಅದುಲ್ಲಾಮ್, ಅದರ ಸುತ್ತಲಿದ್ದ ಚಿಕ್ಕ ನಗರಗಳು, ಲಾಕೀಷ್ ಅದರ ಸುತ್ತಲಿದ್ದ ಹೊಲಗಳು, ಅಜೇಕ, ಅದರ ಸುತ್ತಲಿದ್ದ ಚಿಕ್ಕ ಪಟ್ಟಣಗಳು. ಹೀಗೆ ಯೆಹೂದ ಪ್ರಾಂತ್ಯದ ಜನರು ಬೇರ್ಷೆಬದಿಂದ ಹಿಡಿದು ಹಿನ್ನೋಮ್ ಕಣಿವೆಯ ತನಕ ಬೇರೆಬೇರೆ ಪಟ್ಟಣಗಳಲ್ಲಿ ವಾಸಿಸಿದರು.

31 ಗೆಬದ ಬೆನ್ಯಾಮೀನ್ ಕುಲದ ಜನರು ಮಿಕ್ಮಾಷಿನಲ್ಲಿಯೂ, ಅಯ್ಯಾ, ಬೇತೇಲ್ ಮತ್ತು ಸುತ್ತಲಿದ್ದ ಸಣ್ಣ ಪಟ್ಟಣಗಳಲ್ಲಿಯೂ ನೆಲೆಸಿದರು. 32 ಅನಾತೋತ್, ನೋಬ್ ಮತ್ತು ಅನನ್ಯ, 33 ಹಾಚೋರ್, ರಾಮಾ, ಗಿತ್ತಯಿಮ್, 34 ಹಾದೀದ್, ಚೆಬೋಮಿಮ್ ಮತ್ತು ನೆಬಲ್ಲಾಟ್, 35 ಲೋದ್, ಓನೋ ಮತ್ತು ಗೇಹರಾಷೀಮ್ ಶಿಲ್ಪಿಯವರ ಕಣಿವೆ ಇವುಗಳಲ್ಲಿ ನೆಲೆಸಿದರು. 36 ಲೇವಿಕುಲದವರಲ್ಲಿ ಕೆಲವು ವರ್ಗಗಳವರು ಬೆನ್ಯಾಮೀನರ ಪ್ರದೇಶಕ್ಕೆ ಹೋದರು.

ಅಪೊಸ್ತಲರ ಕಾರ್ಯಗಳು 4:1-22

ನ್ಯಾಯಸಭೆಯ ಮುಂದೆ ಪೇತ್ರ ಮತ್ತು ಯೋಹಾನ

ಪೇತ್ರ ಮತ್ತು ಯೋಹಾನ ಜನರೊಂದಿಗೆ ಮಾತಾಡುತ್ತಿದ್ದಾಗ, ಕೆಲವು ಜನರು ಅವರ ಬಳಿಗೆ ಬಂದರು. ಅಲ್ಲಿ ಕೆಲವು ಯೆಹೂದ್ಯ ಯಾಜಕರಿದ್ದರು. ಕೆಲವು ಸದ್ದುಕಾಯರಿದ್ದರು ಮತ್ತು ದೇವಾಲಯ ಕಾಯುವ ಸಿಪಾಯಿಗಳ ಅಧಿಪತಿಯೂ ಇದ್ದನು. ಈ ಇಬ್ಬರು ಅಪೊಸ್ತಲರು ಜನರಿಗೆ ಉಪದೇಶ ಮಾಡುತ್ತಿರುವುದನ್ನು ಕಂಡು ಅವರು ಸಿಟ್ಟುಗೊಂಡರು. ಯೇಸುವಿನ ಶಕ್ತಿಯ ಮೂಲಕವಾಗಿ ಜನರು ಪುನರುತ್ಥಾನ ಹೊಂದುತ್ತಾರೆ ಎಂದು ಪೇತ್ರ ಮತ್ತು ಯೋಹಾನ ಬೋಧಿಸುತ್ತಿದ್ದರು. ಯೆಹೂದ್ಯ ನಾಯಕರು ಪೇತ್ರ ಮತ್ತು ಯೋಹಾನರನ್ನು ಬಂಧಿಸಿ ಸೆರೆಮನೆಗೆ ಹಾಕಿದರು. ಆಗಲೇ ಕತ್ತಲಾಗಿತ್ತು. ಆದ್ದರಿಂದ ಅವರು ಪೇತ್ರ ಮತ್ತು ಯೋಹಾನರನ್ನು ಮರುದಿನದವರೆಗೆ ಸೆರೆಯಲ್ಲಿಟ್ಟರು. ಆದರೆ ಪೇತ್ರ ಮತ್ತು ಯೋಹಾನರ ಬೋಧನೆಯನ್ನು ಕೇಳಿ ಅನೇಕರು ನಂಬಿಕೊಂಡರು. ಆಗ ಆ ಸಮುದಾಯದಲ್ಲಿ ವಿಶ್ವಾಸಿಗಳ ಸಂಖ್ಯೆ ಐದು ಸಾವಿರಕ್ಕೆ ಏರಿತ್ತು.

ಮರುದಿನ ಯೆಹೂದ್ಯನಾಯಕರು, ಯೆಹೂದ್ಯರ ಹಿರಿಯನಾಯಕರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಲ್ಲಿ ಸಭೆಸೇರಿದರು. ಅಲ್ಲಿ ಅನ್ನನು (ಪ್ರಧಾನ ಯಾಜಕ), ಕಾಯಫ, ಯೋಹಾನ ಮತ್ತು ಅಲೆಕ್ಸಾಂಡರ್ ಇದ್ದರು. ಪ್ರಧಾನಯಾಜಕನ ಕುಟುಂಬಕ್ಕೆ ಸೇರಿದ ಪ್ರತಿಯೊಬ್ಬರು ಅಲ್ಲಿದ್ದರು. ಅವರು ಪೇತ್ರ ಯೋಹಾನರನ್ನು ಅಲ್ಲಿದ್ದ ಎಲ್ಲಾ ಜನರ ಮುಂದೆ ನಿಲ್ಲಿಸಿದರು. ಯೆಹೂದ್ಯನಾಯಕರು ಅವರನ್ನು “ನೀವು ಈ ಕುಂಟನನ್ನು ಹೇಗೆ ಗುಣಪಡಿಸಿದಿರಿ? ನೀವು ಯಾವ ಶಕ್ತಿಯನ್ನು ಉಪಯೋಗಿಸಿದಿರಿ? ಇದನ್ನು ಯಾರ ಅಧಿಕಾರದಿಂದ ಮಾಡಿದಿರಿ?” ಎಂದು ಅನೇಕ ಸಲ ಕೇಳಿದರು.

ಆಗ ಪೇತ್ರನು ಪವಿತ್ರಾತ್ಮಭರಿತನಾದನು. ಅವನು ಅವರಿಗೆ, “ಜನನಾಯಕರೇ ಮತ್ತು ಹಿರಿಯನಾಯಕರೇ, ಈ ಕುಂಟನಿಗಾದ ಒಳ್ಳೆಯದರ ಬಗ್ಗೆ ನೀವು ನಮ್ಮನ್ನು ಕೇಳುತ್ತಿದ್ದೀರಿ. 10 ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದ ಈ ಮನುಷ್ಯನಿಗೆ ಗುಣವಾಯಿತೆಂಬುದನ್ನು ನೀವು ಮತ್ತು ಯೆಹೂದ್ಯರೆಲ್ಲರು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ! ನೀವು ಯೇಸುವನ್ನು ಶಿಲುಬೆಗೇರಿಸಿದಿರಿ. ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಈ ಮನುಷ್ಯನು ಕುಂಟನಾಗಿದ್ದನು, ಆದರೆ ಈಗ ಇವನು ಗುಣಹೊಂದಿದ್ದಾನೆ ಮತ್ತು ಯೇಸುವಿನ ಹೆಸರಿನಿಂದ ನಿಮ್ಮ ಮುಂದೆ ನಿಂತುಕೊಳ್ಳಲು ಶಕ್ತನಾಗಿದ್ದಾನೆ!

11 ‘ಕಟ್ಟುವವರಾದ ನೀವು ಬೇಡವೆಂದು ಬಿಟ್ಟ ಕಲ್ಲೇ (ಯೇಸು)
    ಮುಖ್ಯವಾದ ಮೂಲೆಗಲ್ಲಾಯಿತು.’(A)

12 ರಕ್ಷಣೆಯು ಯೇಸುವಿನಿಂದಲ್ಲದೆ ಬೇರೆ ಯಾರಲ್ಲಿಯೂ ಸಿಕ್ಕುವುದಿಲ್ಲ. ಆತನ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ” ಎಂದು ಹೇಳಿದನು.

13 ಪೇತ್ರ ಮತ್ತು ಯೋಹಾನರಿಗೆ ವಿಶೇಷವಾದ ಯಾವ ತರಬೇತಿಯಾಗಲಿ ವಿದ್ಯೆಯಾಗಲಿ ಇಲ್ಲವೆಂಬುದು ಯೆಹೂದ್ಯನಾಯಕರಿಗೆ ಗೊತ್ತಿತ್ತು. ಅಲ್ಲದೆ ಅವರು ಹೆದರದೆ ಮಾತಾಡುವುದನ್ನು ಸಹ ನಾಯಕರು ಗಮನಿಸಿದರು. ಆದ್ದರಿಂದ ಆ ನಾಯಕರಿಗೆ ಬಹಳ ಆಶ್ಚರ್ಯವಾಯಿತು. ಪೇತ್ರ ಮತ್ತು ಯೋಹಾನರು ಯೋಸುವಿನೊಂದಿಗೆ ಇದ್ದರೆಂಬುದನ್ನು ಅವರು ಆ ಬಳಿಕ ಗ್ರಹಿಸಿಕೊಂಡರು. 14 ಈ ಇಬ್ಬರು ಅಪೊಸ್ತಲರ ಪಕ್ಕದಲ್ಲೇ ನಿಂತುಕೊಂಡಿದ್ದ ಕುಂಟನನ್ನು ಅವರು ನೋಡಿದರು. ಅವನಿಗೆ ಗುಣವಾಗಿರುವುದನ್ನು ಅವರು ಕಂಡರು. ಆದ್ದರಿಂದ ಅಪೊಸ್ತಲರ ಮಾತಿಗೆ ವಿರುದ್ಧವಾಗಿ ಅವರೇನೂ ಹೇಳಲಾಗಲಿಲ್ಲ.

15 ಯೆಹೂದ್ಯನಾಯಕರು ಅಪೊಸ್ತಲರನ್ನು ಸಭೆಯಿಂದ ಹೊರಗೆ ಕಳುಹಿಸಿ, 16 “ಇವರಿಗೆ ನಾವೇನು ಮಾಡೋಣ? ಇವರು ದೊಡ್ಡ ಅದ್ಭುತಕಾರ್ಯ ಮಾಡಿರುವುದು ಜೆರುಸಲೇಮಿನಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತಿದೆ. ಈ ಅದ್ಭುತಕಾರ್ಯವು ಸ್ಪಷ್ಟವಾಗಿರುವುದರಿಂದ ಅದನ್ನು ಅಸತ್ಯವೆಂದು ಹೇಳಲಾಗದು. 17 ಆದರೆ ಈ ಮನುಷ್ಯನ (ಯೇಸುವಿನ) ಬಗ್ಗೆ ಜನರಿಗೆ ಹೇಳದಂತೆ ನಾವು ಅವರನ್ನು ಬೆದರಿಸಬೇಕು. ಆಗ ಈ ಸಮಾಚಾರ ಜನರ ಮಧ್ಯದಲ್ಲಿ ಹರಡುವುದಿಲ್ಲ” ಎಂದು ಅವರು ಮಾತಾಡಿಕೊಂಡರು.

18 ಆದ್ದರಿಂದ ಯೆಹೂದ್ಯನಾಯಕರು ಪೇತ್ರ ಮತ್ತು ಯೋಹಾನರನ್ನು ಮತ್ತೆ ಒಳಗೆ ಕರೆಸಿ, ಯೇಸುವಿನ ಹೆಸರಿನಲ್ಲಿ ಏನೂ ಹೇಳಬಾರದೆಂದೂ, ಏನೂ ಬೋಧಿಸಬಾರದೆಂದೂ ಎಚ್ಚರಿಕೆ ಕೊಟ್ಟರು. 19 ಆದರೆ ಪೇತ್ರ ಮತ್ತು ಯೋಹಾನ ಅವರಿಗೆ, “ನಾವು ನಿಮಗೆ ವಿಧೇಯರಾಗಬೇಕೇ ಅಥವಾ ದೇವರಿಗೆ ವಿಧೇಯರಾಗಬೇಕೇ? ಇದರಲ್ಲಿ ಯಾವುದು ದೇವರಿಗೆ ಅಪೇಕ್ಷೆಯಾದದು? ನೀವೇ ಹೇಳಿ. 20 ನಾವಂತೂ ಸುಮ್ಮನಿರಲಾರೆವು. ನಾವು ಕಂಡ ಮತ್ತು ಕೇಳಿದ ಸಂಗತಿಗಳ ಬಗ್ಗೆ ಜನರಿಗೆ ಹೇಳಲೇಬೇಕು” ಎಂದು ಉತ್ತರಕೊಟ್ಟರು.

21-22 ಯೆಹೂದ್ಯನಾಯಕರಿಗೆ ಅಪೊಸ್ತಲರನ್ನು ದಂಡಿಸಲು ಯಾವ ಮಾರ್ಗವೂ ತೋಚಲಿಲ್ಲ, ಯಾಕೆಂದರೆ ಸಂಭವಿಸಿದ ಕಾರ್ಯಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. (ಈ ಸೂಚಕಕಾರ್ಯದಿಂದ ಗುಣಹೊಂದಿದ ವ್ಯಕ್ತಿಗೆ ನಲವತ್ತು ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿತ್ತು.) ಆದ್ದರಿಂದ ಯೆಹೂದ್ಯನಾಯಕರು ಅಪೊಸ್ತಲರನ್ನು ಮತ್ತೆ ಎಚ್ಚರಿಸಿ ಕಳುಹಿಸಿಬಿಟ್ಟರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International