Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
1 ಪೂರ್ವಕಾಲವೃತ್ತಾಂತ 3-5

ದಾವೀದನ ಗಂಡುಮಕ್ಕಳು

ದಾವೀದನ ಕೆಲವು ಗಂಡುಮಕ್ಕಳು ಹೆಬ್ರೋನಿನಲ್ಲಿ ಹುಟ್ಟಿದರು. ದಾವೀದನ ಗಂಡುಮಕ್ಕಳು ಯಾರೆಂದರೆ:

ಅಮ್ನೋನನು ದಾವೀದನ ಚೊಚ್ಚಲಮಗನು. ಅವನ ತಾಯಿ ಅಹೀನೋವಮಳು. ಈಕೆಯು ಇಜ್ರೇಲಿನವಳು.

ಎರಡನೆಯ ಮಗನು ಕರ್ಮೇಲ್ಯಳಾದ ಅಬೀಗೈಲಳ ಮಗನಾದ ದಾನಿಯೇಲನು.

ಅಬ್ಷಾಲೋಮನು ದಾವೀದನ ಮೂರನೆಯ ಮಗನು. ಇವನ ತಾಯಿ ಮಾಕಳು. ಈಕೆಯು ಗೆಷೂರಿನ ಅರಸನಾದ ತಲ್ಮೈಯ ಮಗಳು.

ನಾಲ್ಕನೆಯವನು ಅದೋನೀಯನು. ಇವನು ಹಗ್ಗೀತಳ ಮಗನು.

ಶೆಫಟ್ಯನು ಐದನೆಯ ಮಗನು. ಇವನ ತಾಯಿಯ ಹೆಸರು ಅಬೀಟಲ.

ಆರನೆಯವನು ಇತ್ರಾಮ. ಇವನ ತಾಯಿಯ ಹೆಸರು ಎಗ್ಲ.

ಈ ಆರು ಮಂದಿ ಮಕ್ಕಳು ದಾವೀದನಿಗೆ ಹೆಬ್ರೋನಿನಲ್ಲಿ ಹುಟ್ಟಿದರು.

ದಾವೀದನು ಅಲ್ಲಿ ಏಳುವರೆ ವರ್ಷ ಆಳಿದನು. ದಾವೀದನು ಜೆರುಸಲೇಮಿನಲ್ಲಿ ಮೂವತ್ತುಮೂರು ವರ್ಷ ಅರಸನಾಗಿದ್ದನು. ದಾವೀದನಿಗೆ ಜೆರುಸಲೇಮಿನಲ್ಲಿ ಹುಟ್ಟಿದ ಮಕ್ಕಳು ಯಾರೆಂದರೆ:

ಬತ್ಷೇಬಳ ನಾಲ್ಕು ಮಂದಿ ಮಕ್ಕಳು: ಶಿಮ್ಮ ಶೋಬಾಬ್, ನಾತಾನ್ ಮತ್ತು ಸೊಲೊಮೋನನು. ಬತ್ಷೇಬಳು ಅಮ್ಮೀಯೇಲನ ಮಗಳು. 6-8 ಇವರಲ್ಲದೆ ಅವನ ಬೇರೆ ಒಂಭತ್ತು ಮಕ್ಕಳು ಯಾರೆಂದರೆ: ಇಬ್ಹಾರ್, ಎಲೀಷಾಮ, ಎಲೀಫೆಲೆಟ್, ನೋಗ, ನೆಫೆಗ್, ಯಾಫೀಯ, ಎಲೀಷಾಮ, ಎಲ್ಯಾದ ಮತ್ತು ಎಲೀಫೆಲೆಟ್. ಇವರೆಲ್ಲಾ ದಾವೀದನ ಮಕ್ಕಳು. ತನ್ನ ಉಪಪತ್ನಿಯರಿಂದ ದಾವೀದನಿಗೆ ಬೇರೆ ಗಂಡುಮಕ್ಕಳೂ ಇದ್ದರು. ತಾಮಾರ್ ಎಂಬಾಕೆಯು ದಾವೀದನ ಮಗಳು.

ದಾವೀದನ ನಂತರ ಯೆಹೂದ ಪ್ರಾಂತ್ಯದ ಅರಸರು

10 ಸೊಲೊಮೋನನ ಮಗನು ರೆಹಬ್ಬಾಮ. ರೆಹಬ್ಬಾಮನ ಮಗನು ಅಬೀಯ. ಅಬೀಯನ ಮಗನು ಆಸ. ಆಸನ ಮಗನು ಯೆಹೋಷಾಫಾಟ್. 11 ಯೆಹೋಷಾಫಾಟನ ಮಗನು ಯೆಹೋರಾಮ್. ಯೆಹೋರಾಮನ ಮಗನು ಅಹಜ್ಯ. ಅಹಜ್ಯನ ಮಗನು ಯೆಹೋವಾಷ. 12 ಯೆಹೋವಾಷನ ಮಗನು ಅಮಚ್ಯ. ಅಮಚ್ಯನ ಮಗನು ಅಜರ್ಯ. ಅಜರ್ಯನ ಮಗನು ಯೋತಾಮ್. 13 ಯೋತಾಮನ ಮಗನು ಅಹಾಜ. ಅಹಾಜನ ಮಗನು ಹಿಜ್ಕೀಯ. ಹಿಜ್ಕೀಯನ ಮಗನು ಮನಸ್ಸೆ. 14 ಮನಸ್ಸೆಯ ಮಗನು ಅಮೋನ. ಅಮೋನನ ಮಗನು ಯೋಷೀಯ.

15 ಯೋಷೀಯನ ಗಂಡುಮಕ್ಕಳು ಯಾರೆಂದರೆ: ಮೊದಲನೆಯವನು ಯೋಹಾನಾನ್; ಎರಡನೆಯವನು ಯೆಹೋಯಾಕೀಮ; ಮೂರನೆಯವನು ಚಿದ್ಕೀಯ; ನಾಲ್ಕನೆಯವನು ಶಲ್ಲೂಮ್.

16 ಯೆಹೋಯಾಕೀಮನ ಗಂಡುಮಕ್ಕಳು ಯಾರೆಂದರೆ: ಯೆಕೊನ್ಯ ಮತ್ತು ಚಿದ್ಕೀಯ.[a]

ಬಾಬಿಲೋನ್ ದೇಶಕ್ಕೆ ಸೆರೆಹೋದ ಬಳಿಕ ದಾವೀದನ ವಂಶಾವಳಿ

17 ಯೆಹೋಯಾಕೀಮನು ಬಾಬಿಲೋನಿಗೆ ಸೆರೆಒಯ್ದ ಬಳಿಕ ಅವನಿಗೆ ಹುಟ್ಟಿದ ಗಂಡುಮಕ್ಕಳು: ಶೆಯಲ್ತೀಯೇಲ್,

18 ಮಲ್ಕೀರಾಮ್, ಪೆದಾಯ, ಶೆನಚ್ಚರ್, ಯೆಕಮ್ಯ, ಹೋಷಾಮ ಮತ್ತು ನೆದಬ್ಯ.

19 ಪೆದಾಯನ ಗಂಡುಮಕ್ಕಳು: ಜೆರುಬ್ಬಾಬೆಲ್ ಮತ್ತು ಶಿಮ್ಮೀ. ಜೆರುಬ್ಬಾಬೆಲನ ಗಂಡುಮಕ್ಕಳು: ಮೆಷುಲ್ಲಾಮ್ ಮತ್ತು ಹನನ್ಯ. ಶೆಲೋಮೀತಳು ಅವರ ತಂಗಿ. 20 ಜೆರುಬ್ಬಾಬೆಲನಿಗೆ ಐದು ಮಂದಿ ಬೇರೆ ಗಂಡುಮಕ್ಕಳಿದ್ದರು. ಅವರು ಯಾರೆಂದರೆ: ಹಷುಬ, ಓಹೆಲ್, ಬೆರೆಕ್ಯ, ಹಸದ್ಯ ಮತ್ತು ಯೂಷಬ್ಹೆಸೆದ್.

21 ಹನನ್ಯನ ಮಗನ ಹೆಸರು: ಪೆಲೆಟ್ಯ, ಪೆಲೆಟ್ಯನ ಮಗನು ಯೆಶಾಯ, ಯೆಶಾಯನ ಮಗನು ರೆಫಾಯ, ರೆಫಾಯನ ಮಗನು ಅರ್ನಾನ್, ಅರ್ನಾನನ ಮಗನು ಓಬದ್ಯ, ಓಬದ್ಯನ ಮಗನು ಶೆಕನ್ಯ.

22 ಶೆಕನ್ಯನ ಸಂತತಿಯವರು ಆರು ಮಂದಿ: ಶೆಮಾಯ ಮತ್ತು ಅವನ ಗಂಡುಮಕ್ಕಳು, ಹಟ್ಟೂಷ್, ಇಗಾಲ್, ಬಾರೀಹ, ನೆಯರ್ಯ ಮತ್ತು ಶಾಫಾಟ್.

23 ನೆಯರ್ಯನಿಗೆ ಮೂರು ಮಂದಿ ಗಂಡುಮಕ್ಕಳು: ಎಲ್ಯೋಗೇನೈ, ಹಿಜ್ಕೀಯ ಮತ್ತು ಅಜ್ರೀಕಾಮ್.

24 ಎಲ್ಯೋಗೇನೈಗೆ ಏಳು ಮಂದಿ ಗಂಡುಮಕ್ಕಳು. ಅವರು ಯಾರೆಂದರೆ: ಹೋದವ್ಯ, ಎಲ್ಯಾಷೀಬ್, ಪೆಲಾಯ, ಅಕ್ಕೂಬ್, ಯೋಹಾನಾನ್, ದೆಲಾಯ ಮತ್ತು ಅನಾನೀ.

ಯೆಹೂದನ ಗಂಡುಮಕ್ಕಳ ಪಟ್ಟಿ

ಪೆರೆಚ್, ಹೆಚ್ರೋನ್, ಕರ್ಮಿ, ಹೂರ್ ಮತ್ತು ಶೋಬಾಲರು.

ಶೋಬಾಲನ ಮಗ ರೆವಾಯ. ರೆವಾಯನ ಮಗನು ಯಹತ್. ಯಹತನ ಗಂಡುಮಕ್ಕಳು ಅಹೂಮೈ ಮತ್ತು ಲಹದ್. ಅಹೂಮೈ ಮತ್ತು ಲಹದ್‌ರವರು ಚೊರ್ರರ ಸಂತತಿಯವರು.

ಏಟಾಮನ ಗಂಡುಮಕ್ಕಳು ಯಾರೆಂದರೆ: ಇಜ್ರೆಯೇಲ್, ಇಷ್ಮ ಮತ್ತು ಇಬ್ಬಾಷ್. ಇವರ ಸಹೋದರಿ ಹಚೆಲೆಲ್ ಪೋನೀ.

ಪೆನೂವೇಲನು ಗೆದೋರನ ತಂದೆ: ಏಜೆರನು ಹೂಷಾಹ್ಯನ ತಂದೆ.

ಇವರು ಹೂರನ ಗಂಡುಮಕ್ಕಳು. ಹೂರನು ಎಫ್ರಾತಾಹಳ ಮೊದಲನೆಯ ಮಗನು. ಇವನೇ ಬೆತ್ಲೇಹೇಮ್ಯರ ಮೂಲಪಿತೃ.

ತೆಕೋವನ ತಂದೆಯಾದ ಅಷ್ಹೂರನಿಗೆ ಇಬ್ಬರು ಹೆಂಡತಿಯರು. ಇವರ ಹೆಸರು ಹೆಲಾಹ ಮತ್ತು ನಾರ. ನಾರಳಲ್ಲಿ ಹುಟ್ಟಿದ ಗಂಡುಮಕ್ಕಳು: ಅಹುಜ್ಜಾಮ್, ಹೇಫೆರ್, ತೇಮಾನ್ ಮತ್ತು ಅಹಷ್ಟಾರ್ಯ. ಹೆಲಾಹಳ ಗಂಡುಮಕ್ಕಳು: ಚೆರೆತ್, ಇಚ್ಹಾರ್, ಎತ್ನಾನ್ ಮತ್ತು ಕೋಚ. ಕೋಚನು ಆನೂಬ್ ಮತ್ತು ಚೊಬೇಬನ ತಂದೆ. ಕೋಚನು ಅಹರ್ಹೇಲ್ ವಂಶದವರ ಮೂಲಪಿತೃ. ಅಹರ್ಹೇಲನು ಹಾರಮನ ಮಗನು.

ಯಾಬೇಚನು ತುಂಬ ಒಳ್ಳೆಯ ವ್ಯಕ್ತಿಯಾಗಿದ್ದನು. ಅವನು ತನ್ನ ಅಣ್ಣತಮ್ಮಂದಿರಿಗಿಂತ ಉತ್ತಮನಾಗಿದ್ದನು. ಅವನ ತಾಯಿ, “ನಾನು ಅವನನ್ನು ಹೆರುವಾಗ ತುಂಬಾ ನೋವನ್ನು ಅನುಭವಿಸಿದ್ದರಿಂದ ನಾನು ಅವನಿಗೆ ಯಾಬೇಚ ಎಂದು ಹೆಸರಿಟ್ಟೆನು” ಎಂದು ಹೇಳಿದಳು. 10 ಯಾಬೇಚನು ಇಸ್ರೇಲರ ದೇವರಿಗೆ ಹೀಗೆ ಪ್ರಾರ್ಥಿಸಿದನು: “ದೇವರೇ, ನೀನು ನನ್ನನ್ನು ನಿಜವಾಗಿಯೂ ಆಶೀರ್ವದಿಸು. ನನ್ನ ಪ್ರಾಂತ್ಯವನ್ನು ವಿಸ್ತರಿಸು. ನನ್ನ ಬಳಿಯಲ್ಲಿಯೇ ಇದ್ದು ನನಗಾರೂ ನೋವು ಮಾಡದಂತೆ ನೋಡಿಕೊಂಡು ನನ್ನನ್ನು ರಕ್ಷಿಸು” ಎಂಬ ಯಾಬೇಚನ ಕೋರಿಕೆಯನ್ನು ದೇವರು ಕೇಳಿದನು.

11 ಕೆಲೂಬನು ಶೂಹನ ಸಹೋದರ. ಕೆಲೂಬನ ಮಗನು ಮೆಹೀರ್. ಮೆಹೀರನು ಎಷ್ಟೋನನ ತಂದೆ. 12 ಎಷ್ಟೋನನು ಬೇತ್ರಾಫ, ಪಾಸೇಹ ಮತ್ತು ತೆಹಿನ್ನ ಇವರ ತಂದೆ. ತೆಹಿನ್ನ ಇರ್‌ನಾಹಷನ ತಂದೆ. ಇವರೆಲ್ಲರೂ ರೇಕಾಬದವರು.

13 ಕೆನಜನ ಗಂಡುಮಕ್ಕಳು ಯಾರೆಂದರೆ: ಒತ್ನೀಯೇಲ್ ಮತ್ತು ಸೆರಾಯ. ಒತ್ನೀಯೇಲನ ಮಕ್ಕಳು: ಹತತ್ ಮತ್ತು ಮೆಯೋನೋತೈ. 14 ಮೆಯೋನೋತೈ ಒಫ್ರಾಹನ ತಂದೆ.

ಸೆರಾಯನು ಯೋವಾಬನ ತಂದೆ. ಯೋವಾಬನು ಗೇಹರಾಷೀಮ್ಯರ ಸ್ಥಾಪಕನು. ಇಲ್ಲಿಯವರು ನಿಪುಣ ಕುಶಲ ಕೆಲಸಗಾರರಾಗಿದ್ದುದರಿಂದ ಅವರಿಗೆ ಈ ಹೆಸರು ಬಂದಿತು.

15 ಕಾಲೇಬನು ಯೆಫುನ್ನೆಯ ಮಗನು. ಕಾಲೇಬನ ಗಂಡುಮಕ್ಕಳು: ಈರು, ಏಲ, ನಾಮ್, ಏಲನ ಮಗನ ಹೆಸರು ಕೆನಜ್.

16 ಯೆಹಲ್ಲೆಲೇಲನ ಗಂಡುಮಕ್ಕಳು ಯಾರೆಂದರೆ: ಜೀಪ್, ಜೀಫಾ, ತೀರ್ಯ ಮತ್ತು ಅಸರೇಲ್.

17-18 ಎಜ್ರನ ಗಂಡುಮಕ್ಕಳು ಯಾರೆಂದರೆ: ಯೆತೆರ್, ಮೆರೆದ್, ಏಫೆರ್, ಯಾಲೋನ್, ಮೆರೆದನ ಗಂಡುಮಕ್ಕಳು: ಮಿರ್ಯಾಮ್, ಶಮ್ಮೈ ಮತ್ತು ಇಷ್ಬಹ. ಇಷ್ಬಹನ ಮಗ ಎಷ್ಟೆಮೋ. ಮೆರೆದನಿಗೆ ಯೆಹೂದ್ಯಳಾದ ಹೆಂಡತಿಯಿದ್ದಳು. ಅವಳಲ್ಲಿ ಯೆರೆದ್, ಹೆಬೆರ್ ಮತ್ತು ಯೆಕೊತೀಯೇಲ್ ಎಂಬ ಗಂಡುಮಕ್ಕಳು ಹುಟ್ಟಿದರು. ಯೆರೆದನು ಗೆದೋರ್ಯನ ತಂದೆ. ಹೆಬೆರನು ಸೋಕೋನನ ತಂದೆ; ಯೆಕೊತೀಯೇಲನು ಜಾನೋಹನ ತಂದೆ. ಇವರು ಬಿತ್ಯಳ ಮಕ್ಕಳು; ಬಿತ್ಯಳು ಫರೋಹನ ಮಗಳು. ಈಕೆಯೇ ಮೆರೆದನ ಈಜಿಪ್ಟಿನ ಹೆಂಡತಿ.

19 ಮೆರೆದನ ಹೆಂಡತಿಯು ನೆಹಮನ ತಂಗಿ. ಮೆರೆದನ ಹೆಂಡತಿಯು ಯೂದಾಯದಿಂದ ಬಂದವಳು. ಮೆರೆದನ ಹೆಂಡತಿಯ ಗಂಡುಮಕ್ಕಳು: ಕೆಯೀಲ ಮತ್ತು ಎಷ್ಟೆಮೋ ಗೋತ್ರಗಳ ಮೂಲಪಿತೃಗಳು. ಕೆಯೀಲನು ಗರ್ಮ್ಯರಿಗೆ ಸೇರಿದವನು ಮತ್ತು ಎಷ್ಟೆಮೋವನು ಮಾಕಾತ್ಯರಿಗೆ ಸೇರಿದವನು. 20 ಶೀಮೋನನ ಮಕ್ಕಳು ಯಾರೆಂದರೆ: ಅಮ್ನೋನ್, ರಿನ್ನ, ಬೆನ್ಹಾನಾನ್ ಮತ್ತು ತೀಲೋನ್.

ಇಷ್ಷೀಯ ಮಕ್ಕಳು: ಜೋಹೇತ್ ಮತ್ತು ಬೆನ್ ಜೋಹೇತ್.

21-22 ಶೇಲನು ಯೆಹೂದನ ಮಗನು. ಶೇಲನ ಮಕ್ಕಳು: ಏರ್, ಲದ್ದ, ಯೊಕೀವ್, ಕೋಜೇಬದ ಜನರು. ಯೋವಾಷ್ ಮತ್ತು ಸಾರಾಫ್. ಏರನ ಮಗನು ಲೇಕಾಹ್ಯ. ಲದ್ದನು ಮರೇಷನ ತಂದೆ ಮತ್ತು ಬೇತಷ್ಬೇಯದ, ಬಟ್ಟೆ ನೇಕಾರರ ಮೂಲಪಿತೃ. ಯೋವಾಷ್ ಮತ್ತು ಸಾರಾಫ್ ಮೋವಾಬ್ಯರ ಸ್ತ್ರೀಯರನ್ನು ಮದುವೆಮಾಡಿಕೊಂಡು ಬೆತ್ಲೆಹೇಮಿಗೆ ಹಿಂತಿರುಗಿದರು. ಈ ಕುಟುಂಬದ ಕುರಿತಾದ ಬರಹಗಳು ಪುರಾತನ ಕಾಲದ್ದು. 23 ಶೇಲನ ಮಕ್ಕಳು ಮಣ್ಣಿನಿಂದ ವಸ್ತುಗಳನ್ನು ತಯಾರಿಸುತ್ತಿದ್ದರು. ನೆಟಾಯಿಮ್ ಮತ್ತು ಗೆದೇರ ಎಂಬ ಸ್ಥಳಗಳಲ್ಲಿ ವಾಸವಾಗಿದ್ದ ಅವರು ಅರಸನಿಗೋಸ್ಕರ ಕೆಲಸಮಾಡುತ್ತಿದ್ದರು.

ಸಿಮೆಯೋನನ ಗಂಡುಮಕ್ಕಳು

24 ಸಿಮೆಯೋನನ ಗಂಡುಮಕ್ಕಳು ಯಾರೆಂದರೆ: ನೆಮೂವೇಲ್, ಯಾಮೀನ್, ಯಾರೀದ್, ಜೆರಹ ಮತ್ತು ಸೌಲ. 25 ಸೌಲನ ಮಗನು ಶಲ್ಲುಮ. ಶಲ್ಲುಮನ ಮಗನು ಮಿಬ್ಸಾಮ್; ಮಿಬ್ಸಾಮನ ಮಗನು ಮಿಷ್ಮ.

26 ಮಿಷ್ಮನ ಮಗನು ಹಮ್ಮೂವೇಲ. ಹಮ್ಮೂವೇಲನ ಮಗನು. ಜಕ್ಕೂರ್. ಜಕ್ಕೂರನ ಮಗನು ಶಿಮ್ಮೀ. 27 ಶಿಮ್ಮೀಗೆ ಹದಿನಾರು ಮಂದಿ ಗಂಡುಮಕ್ಕಳೂ ಆರು ಮಂದಿ ಹೆಣ್ಣುಮಕ್ಕಳೂ ಇದ್ದರು. ಶಿಮ್ಮೀಯ ಸಹೋದರರಿಗೆ ಹೆಚ್ಚು ಮಕ್ಕಳಿರಲಿಲ್ಲ. ಇವರ ಸಂತತಿಯವರ ಸಂಖ್ಯೆಯು ಯೆಹೂದದ ಸಂತತಿಯವರಷ್ಟು ಹೆಚ್ಚಾಗಿರಲಿಲ್ಲ.

28 ಶಿಮ್ಮಿಯ ಗಂಡುಮಕ್ಕಳು: ಬೇರ್ಷೆಬ, ಮೋಲಾದ್, ಹಚರ್ ಷೂವಾಲ್, 29 ಬಿಲ್ಹ, ಎಚೆಮ್, ತೋಲಾಬ್, 30 ಬೆತೂವೇಲ್, ಹೊರ್ಮ, ಚಿಕ್ಲಗ್, 31 ಬೇತ್‌ಮರ್ಕಾಬೋತ್, ಹಚರ್ ಸೂಸೀಮ್, ಬೇತ್‌ಬಿರೀ ಮತ್ತು ಶಾರಯಿಮ್ ಊರುಗಳಲ್ಲಿ ವಾಸಿಸಿದರು. ದಾವೀದನು ಅರಸನಾಗುವ ತನಕ ಅವರು ಆ ಊರುಗಳಲ್ಲಿ ನೆಲೆಸಿದರು. 32 ಈ ಪಟ್ಟಣಗಳ ಹತ್ತಿರವಿರುವ ಐದು ಹಳ್ಳಿಗಳು ಯಾವುವೆಂದರೆ: ಏಟಾಮ್, ಅಯಿನ್, ರಿಮ್ಮೋನ್, ತೋಕೆನ್ ಮತ್ತು ಆಷಾನ್. 33 ಬೇರೆ ಹಳ್ಳಿಗಳು ಬಾಲ್ ತನಕವೂ ಇದ್ದವು. ಅವರು ವಾಸವಾಗಿದ್ದದ್ದು ಅಲ್ಲಿಯೇ. ಇದಲ್ಲದೆ ಅವರು ತಮ್ಮ ವಂಶದ ಚರಿತ್ರೆಯನ್ನೂ ಬರೆದಿಟ್ಟರು.

34-38 ಅವರ ಕುಲಪ್ರಧಾನರು ಯಾರೆಂದರೆ: ಮೊಷೋಬಾಬ್, ಯಮ್ಲೇಕ್, ಅಮಚ್ಯನ ಮಗನಾದ ಯೋಷ, ಯೋವೇಲ್, ಯೇಹೂ (ಯೇಹೂವು ಯೊಷಿಬ್ಯನ ಮಗ, ಸೆರಾಯನ ಮೊಮ್ಮಗ ಮತ್ತು ಅಸಿಯೇಲನ ಮರಿಮಗ). ಎಲ್ಯೋವೇನೈ, ಯಾಕೋಬ, ಯೆಷೋಹಾಮ, ಅಸಾಯ, ಆದೀಯೇಲ್, ಯೆಸೀಮಿಯೇಲ್, ಬೆನಾಯ ಮತ್ತು ಶಿಷ್ಪಿಯನ ಮಗನಾದ ಜೀಜ. ಶಿಪ್ಪಿಯು ಅಲ್ಲೋನನ ಮಗನು; ಅಲ್ಲೋನನು ಯೆದಾಯನ ಮಗನು; ಯೆದಾಯನು ಶಿಮ್ರಿಯ ಮಗನು; ಶಿಮ್ರಿಯು ಶೆಮಾಯನ ಮಗನು.

ಈ ಕುಲದ ಜನರು ಬಹುಸಂಖ್ಯಾತರಾಗಿ ಹೆಚ್ಚಿದರು. 39 ಗೆದೋರ್ ಊರಿನ ಹೊರಭಾಗದಲ್ಲಿರುವ ತಗ್ಗಿನ ಪೂರ್ವ ದಿಕ್ಕಿನಲ್ಲಿ ಅವರು ನೆಲೆಸಿದರು. ತಮ್ಮ ದನಕುರಿಗಳಿಗಾಗಿ ಹುಲ್ಲುಗಾವಲನ್ನು ಹುಡುಕಿಕೊಂಡು ಅವರು ಅಲ್ಲಿಗೆ ಹೋಗಿದ್ದರು. 40 ಅಲ್ಲಿ ಫಲವತ್ತಾದ ಭೂಮಿಯನ್ನೂ ಹಸಿರು ಹುಲ್ಲುಗಾವಲನ್ನೂ ಕಂಡು ಅಲ್ಲಿಯೇ ನೆಲೆಸಿದರು. ಆ ಪ್ರದೇಶವು ಪ್ರಶಾಂತವಾಗಿತ್ತು. ಹಿಂದಿನ ಕಾಲದಲ್ಲಿ ಹಾಮನ ಸಂತತಿಯವರು ಅಲ್ಲಿ ನೆಲೆಸಿದ್ದರು. 41 ಯೆಹೂದದ ಅರಸನಾಗಿದ್ದ ಹಿಜ್ಕೀಯನ ಕಾಲದಲ್ಲಿ ಇದು ಆಯಿತು. ಇವರು ಗೆದೋರಿಗೆ ಬಂದು ಹಾಮನ ಸಂತತಿಯವರೊಂದಿಗೆ ಯುದ್ಧಮಾಡಿ ಅವರ ಗುಡಾರಗಳನ್ನು ನಾಶಮಾಡಿದರು. ಅಲ್ಲದೆ ಮೆಗೂನ್ಯರ ವಿರುದ್ಧವಾಗಿ ಯುದ್ಧಮಾಡಿ ಅಲ್ಲಿ ನೆಲೆಸಿದರು. ಇವರು ಮೆಗೂನ್ಯರನ್ನೆಲ್ಲಾ ನಾಶಮಾಡಿದರು. ಇಂದಿನವರೆಗೂ ಮೆಗೂನ್ಯರಲ್ಲಿ ಯಾರೂ ಉಳಿದಿಲ್ಲ. ಹೀಗೆ ಆ ಸ್ಥಳದಲ್ಲಿ ಅವರು ನೆಲೆಸಿದರು; ಯಾಕೆಂದರೆ ಅವರ ಪಶುಗಳಿಗೆ ಅಲ್ಲಿ ಸಾಕಷ್ಟು ಹುಲ್ಲಿತ್ತು.

42 ಸಿಮೆಯೋನನ ಕುಲದ ಐನೂರು ಮಂದಿ ಸೇಯೀರ್ ಬೆಟ್ಟಪ್ರಾಂತ್ಯಕ್ಕೆ ಹೋದರು. ಇಷ್ಷೀಯ ಗಂಡುಮಕ್ಕಳು ಈ ಗುಂಪಿನ ನಾಯಕರಾಗಿದ್ದರು. ಅವರು ಯಾರೆಂದರೆ: ಪೆಲಟ್ಯ, ನೆಗರ್ಯ, ರೆಫಾಯ ಮತ್ತು ಉಜ್ಜೀಯೇಲ್. ಅಲ್ಲಿ ವಾಸಿಸುವ ಜನರೊಂದಿಗೆ ಇವರು ಕಾದಾಡಿದರು. 43 ಆಗ ಅಲ್ಲಿ ಸ್ವಲ್ಪವೇ ಮಂದಿ ಅಮಾಲೇಕ್ಯರು ವಾಸಿಸುತ್ತಿದ್ದರು. ಈ ಸಿಮೆಯೋನರು ಅವರನ್ನು ಕೊಂದು ಆ ಸ್ಥಳದಲ್ಲಿ ನೆಲೆಸಿದರು. ಇಂದಿನವರೆಗೂ ಸಿಮೆಯೋನರು ಅಲ್ಲಿ ನೆಲೆಸಿದ್ದಾರೆ.

ರೂಬೇನನ ಸಂತತಿಯವರು

1-3 ರೂಬೇನನು ಇಸ್ರೇಲನ ಚೊಚ್ಚಲಮಗ. ಅವನು ಚೊಚ್ಚಲಮಗನಿಗೆ ಸಿಗಬೇಕಾಗಿದ್ದ ಹಕ್ಕುಗಳನ್ನು ಪಡೆದುಕೊಳ್ಳಬೇಕಾಗಿತ್ತು. ಆದರೆ ಅವನು ತನ್ನ ತಂದೆಯ ಉಪಪತ್ನಿಯೊಡನೆ ಸಂಭೋಗಿಸಿದ್ದರಿಂದ ಅವನ ಹಕ್ಕುಗಳು ಯೋಸೇಫನ ಮಕ್ಕಳಿಗೆ ದೊರೆತವು. ಆದ್ದರಿಂದ ವಂಶಾವಳಿಯಲ್ಲಿ ಚೊಚ್ಚಲ ಮಗನ ಸ್ಥಾನ ಅವನಿಗೆ ದೊರೆಯಲಿಲ್ಲ. ಯೆಹೂದನು ತನ್ನ ಎಲ್ಲಾ ಸಹೋದರರಿಗಿಂತ ಬಲಾಢ್ಯನಾದನು. ಆದ್ದರಿಂದ ಅವನ ಕುಲದಿಂದಲೇ ನಾಯಕರುಗಳು ಬಂದರು. ಆದರೆ ಚೊಚ್ಚಲ ಮಗನಿಗೆ ಸಿಗಬೇಕಾಗಿದ್ದ ಇತರ ಹಕ್ಕುಗಳು ಯೋಸೇಫನ ಮಕ್ಕಳಿಗೆ ದೊರೆತವು.

ರೂಬೇನನ ಮಕ್ಕಳು ಯಾರೆಂದರೆ: ಹನೋಕ್, ಫಲ್ಲೂ, ಹೆಚ್ರೋನ್ ಮತ್ತು ಕರ್ಮೀ.

ಇವರು ಯೋವೇಲನ ಸಂತತಿಯವರು: ಶೆಮಾಯನು ಯೋವೇಲನ ಮಗ. ಗೋಗನು ಶೆಮಾಯನ ಮಗ. ಶಿಮ್ಮಿಯು ಗೋಗನ ಮಗ. ಶಿಮ್ಮಿಯ ಮಗನು ಮೀಕ. ಮೀಕನ ಮಗ ರೆವಾಯ. ರೆವಾಯನ ಮಗನು ಬಾಳ್‌ಮಯೊನ್. ಬಾಳ್‌ಮಯೊನನ ಮಗನು ಬೇರ. ಅಶ್ಯೂರದ ಅರಸನಾದ ತಿಗ್ಲತ್ಪಿಲೆಸರನು ಬೇರನನ್ನು ಅವನ ಮನೆಯಿಂದ ಹೊರಡಿಸಿದನು; ಬೇರನು ಅವನ ಸೆರೆಯಾಳಾದನು. ಬೇರನು ರೂಬೇನ್ ಕುಲದ ಪ್ರಧಾನನಾಗಿದ್ದನು.

ಯೋವೇಲನ ಮತ್ತು ಅವನ ಸಂತತಿಯವರೆಲ್ಲರ ವಿಷಯವಾಗಿ ಸಂತಾನಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತದೆ. ಅವನ ಚೊಚ್ಚಲಮಗನು ಯೆಗೀಯೇಲ್, ಅನಂತರ ಹುಟ್ಟಿದವರು ಜೆಕರ್ಯ ಮತ್ತು ಬೆಳ. ಬೆಳನು ಆಜಾಜನ ಮಗ, ಆಜಾಜನು ಶೆಮಯನ ಮಗ, ಶೆಮಯನು ಯೋವೇಲನ ಮಗನು. ಇವರೆಲ್ಲರೂ ನೆಬೋ ಮತ್ತು ಬಾಳ್ಮೆಯೋನ್ ಪ್ರಾಂತ್ಯದ ಅರೋಯೇರ್ ಸುತ್ತಮುತ್ತ ವಾಸಿಸಿದರು. ಬೆಳನ ಜನರು ಯೂಫ್ರೇಟೀಸ್ ನದಿಯ ಸಮೀಪದಲ್ಲಿರುವ ಮರುಭೂಮಿಯವರೆಗೂ ನೆಲೆಸಿದರು. ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳು ಇದ್ದುದರಿಂದ ಗಿಲ್ಯಾದ್ ಪ್ರಾಂತ್ಯದಲ್ಲಿಯೇ ನೆಲೆಸಿದರು. 10 ಸೌಲನು ಅರಸನಾಗಿದ್ದ ಸಮಯದಲ್ಲಿ ಬೆಳನ ಜನರು ಹಗ್ರೀಯರೊಂದಿಗೆ ಯುದ್ಧಮಾಡಿ ಅವರ ಗುಡಾರಗಳಲ್ಲಿ ವಾಸಮಾಡಿದರು. ಆ ಗುಡಾರಗಳಲ್ಲಿ ವಾಸಮಾಡುತ್ತಾ ಗಿಲ್ಯಾದಿನ ಪೂರ್ವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿದರು.

ಗಾದನ ಸಂತತಿಯವರು

11 ರೂಬೇನ್ಯರು ವಾಸಿಸಿದ್ದ ಪ್ರಾಂತ್ಯದ ಪಕ್ಕದಲ್ಲಿಯೇ ಗಾದನ ಕುಲದವರು ವಾಸಿಸಿದರು. ಇವರು ಬಾಷಾನಿನ ಪ್ರದೇಶದಲ್ಲಿ ಸಾಲೆಖ ಪಟ್ಟಣದವರೆಗೂ ನೆಲೆಸಿದರು. 12 ಯೋವೇಲನೇ ಬಾಷಾನಿನ ಮೊದಲನೇ ಪ್ರಧಾನನು. ಇವನ ನಂತರ ಶಾಫಾಮ ಪ್ರಧಾನನಾದನು. ಆಮೇಲೆ ಯನ್ನೈ ಪ್ರಧಾನನಾದನು. 13 ಅವರ ಕುಟುಂಬದ ಏಳು ಮಂದಿ ಸಹೋದರರು ಯಾರೆಂದರೆ: ಮೀಕಾಯೇಲ್, ಮೆಷುಲ್ಲಾಮ್, ಶೆಬ, ಯೋರೈ, ಯಕ್ಕಾನ್, ಜೀಯ ಮತ್ತು ಏಬೆರ್. 14 ಇವರು ಅಬೀಹೈಲನ ಸಂತತಿಯವರು: ಅಬೀಹೈಲನು ಹೂರೀಯ ಮಗ. ಹೂರೀಯು ಯಾರೋಹನ ಮಗ. ಯಾರೋಹನು ಗಿಲ್ಯಾದನ ಮಗ. ಗಿಲ್ಯಾದನು ಮೀಕಾಯೇಲನ ಮಗನು. ಮೀಕಾಯೇಲನು ಯೆಷೀಷೈಯನ ಮಗನು. ಯೆಷೀಷೈ ಯೆಹ್ದೋವಿನ ಮಗನು. ಯೆಹ್ದೋವಿಯು ಅಹೀಬೂಜನ ಮಗನು. 15 ಅಬ್ದೀಯೇಲನ ಮಗನು ಅಹೀಬೂಜನು. ಅಬ್ದೀಯೇಲನು ಗೂನೀಯ ಮಗನು. ಅಹೀಬೂಜನು ಕುಟುಂಬ ಪ್ರಧಾನನಾಗಿದ್ದನು.

16 ಗಿಲ್ಯಾದ್ ಪ್ರಾಂತ್ಯದಲ್ಲಿ ಗಾದ್ ಕುಟುಂಬದ ಜನರು ವಾಸಿಸಿದರು. ಅವರು ಬಾಷಾನ್ ಪ್ರಾಂತ್ಯದಲ್ಲಿಯೂ ಅದರ ಸುತ್ತಮುತ್ತಲಿದ್ದ ಊರುಗಳಲ್ಲಿಯೂ ಶಾರೋನ್ ಪ್ರಾಂತ್ಯದ ಹುಲ್ಲುಗಾವಲುಗಳ ಗಡಿಗಳವರೆಗೂ ನೆಲೆಸಿದರು.

17 ಯೋತಾಮ ಮತ್ತು ಯಾರೊಬ್ಬಾಮನ ಕಾಲದಲ್ಲಿ ಇವರ ಹೆಸರುಗಳನ್ನೆಲ್ಲಾ ಗಾದ್ಯರ ಸಂತಾನ ಚರಿತ್ರೆಯಲ್ಲಿ ಬರೆಯಲ್ಪಟ್ಟಿರುತ್ತದೆ. ಯೋತಾಮನು ಯೆಹೂದದ ಅರಸನಾಗಿದ್ದನು ಮತ್ತು ಯಾರೊಬ್ಬಾಮನು ಇಸ್ರೇಲರ ಅರಸನಾಗಿದ್ದನು.

ಶೂರರಾದ ಯುದ್ಧವೀರರು

18 ರೂಬೇನ್ ಮತ್ತು ಗಾದ್ ಕುಲಗಳಲ್ಲಿ ಮತ್ತು ಮನಸ್ಸೆಯ ಅರ್ಧಕುಲದವರಲ್ಲಿ ನಲವತ್ತನಾಲ್ಕು ಸಾವಿರದ ಏಳುನೂರ ಅರವತ್ತು ಮಂದಿ ಯುದ್ಧವೀರರಿದ್ದರು. ಇವರೆಲ್ಲಾ ಖಡ್ಗ ಗುರಾಣಿಗಳನ್ನೂ ಬಿಲ್ಲುಬಾಣಗಳನ್ನೂ ಉಪಯೋಗಿಸುವದರಲ್ಲಿ ನಿಪುಣರಾಗಿದ್ದರು. 19 ಅವರು ಹಗ್ರೀಯರೊಂದಿಗೂ ಯೆಟೂರ್, ನಾಫೀಷ್ ಮತ್ತು ನೋದಾಬ್ ಊರಿನವರೊಂದಿಗೂ ಯುದ್ಧ ಮಾಡಿದರು. 20 ರೂಬೇನ್, ಮನಸ್ಸೆ, ಗಾದ್ ಕುಲಗಳ ಯೋಧರು ಯುದ್ಧಮಾಡುವಾಗ ದೇವರಲ್ಲಿ ಪ್ರಾರ್ಥಿಸಿದರು. ಅವರು ದೇವರ ಮೇಲೆ ಭರವಸೆಯಿಟ್ಟು ಸಹಾಯಕ್ಕಾಗಿ ಬೇಡಿಕೊಂಡದ್ದರಿಂದ ದೇವರು ಅವರಿಗೆ ಜಯವನ್ನು ಕೊಟ್ಟನು. 21 ವೈರಿಗಳಲ್ಲಿದ್ದ ಎಲ್ಲಾ ಪಶುಗಳನ್ನು ಅವರು ತಮ್ಮ ವಶಕ್ಕೆ ತೆಗೆದುಕೊಂಡರು. ಅವರು ಐವತ್ತು ಸಾವಿರ ಒಂಟೆಗಳು, ಎರಡು ಲಕ್ಷದ ಐವತ್ತು ಸಾವಿರ ಕುರಿಗಳು, ಎರಡು ಸಾವಿರ ಕತ್ತೆಗಳು ಅಲ್ಲದೆ ಒಂದು ಲಕ್ಷ ಸೆರೆಯಾಳುಗಳನ್ನು ತೆಗೆದುಕೊಂಡರು. 22 ದೇವರು ಅವರಿಗೆ ಜಯವನ್ನು ಕೊಟ್ಟಿದ್ದರಿಂದ ಹಗ್ರೀಯರಲ್ಲಿ ಬಹಳ ಮಂದಿಯನ್ನು ಕೊಂದರು. ಆ ಹಗ್ರೀಯರ ಪ್ರದೇಶದಲ್ಲಿ ರೂಬೇನ್, ಗಾದ್, ಮನಸ್ಸೆ ಕುಲಗಳವರು ಸಹ ವಾಸಿಸಿದರು. ಬಾಬಿಲೋನಿನ ಅರಸನು ಇಸ್ರೇಲರನ್ನು ಸೆರೆಹಿಡಿದು ಕೊಂಡೊಯ್ಯುವ ತನಕ ಅವರು ಅಲ್ಲಿಯೇ ವಾಸಮಾಡಿದರು.

23 ಮನಸ್ಸೆಯ ಅರ್ಧಕುಲದ ಜನರು ಬಾಷಾನ್ ಪ್ರದೇಶದಿಂದಿಡಿದು ಬಾಳ್‌ಹೆರ್ಮೋನ್, ಸೆನೀರ್ ಮತ್ತು ಹೆರ್ಮೋನ್ ಪರ್ವತ ಪ್ರಾಂತ್ಯದವರೆಗೂ ನೆಲೆಸಿದರು. ಅವರ ಕುಲದ ಜನರು ಬಹುಸಂಖ್ಯಾತರಾದರು.

24 ಮನಸ್ಸೆಯ ಅರ್ಧಕುಲದ ಅಧಿಪತಿಗಳು ಯಾರೆಂದರೆ: ಏಫೆರ್, ಇಷ್ಷೀ, ಎಲೀಯೇಲ್, ಅಜ್ರೀಯೇಲ್, ಯೆರೆಮೀಯ, ಹೋದವ್ಯ ಮತ್ತು ಯೆಹ್ತೀಯೇಲ್, ಇವರೆಲ್ಲಾ ಬಲಾಢ್ಯರೂ ಧೈರ್ಯಶಾಲಿಗಳೂ ಆದ ವೀರರಾಗಿದ್ದರು. 25 ಆದರೆ ಆ ಅಧಿಪತಿಗಳು ತಮ್ಮ ಪೂರ್ವಿಕರು ಆರಾಧಿಸುತ್ತಿದ್ದ ದೇವರನ್ನು ಬಿಟ್ಟು ಬೇರೆ ದೇವರುಗಳನ್ನು ಪೂಜಿಸತೊಡಗಿ ತಮ್ಮ ದೇವರ ವಿರುದ್ಧವಾಗಿ ಪಾಪಮಾಡಿದರು. ತಾವು ಸೋಲಿಸಿದ ಅನ್ಯಜನಾಂಗದವರ ದೇವರುಗಳನ್ನು ಇವರು ಆರಾಧಿಸಿದರು.

26 ಇಸ್ರೇಲರ ದೇವರು ಅಶ್ಯೂರದ ರಾಜನಾದ ಪೂಲ್ (ತಿಗ್ಲತ್ಪಿಲೆಸರ್) ಅವರ ಮೇಲೆ ಯುದ್ಧಕ್ಕೆ ಹೋಗುವಂತೆ ಮಾಡಿದನು. ಅವರು ಬಂದು ರೂಬೇನ್, ಗಾದ್ ಮತ್ತು ಮನಸ್ಸೆಯ ಅರ್ಧ ಕುಲದವರೊಂದಿಗೆ ಯುದ್ಧ ಮಾಡಿದರು. ಯುದ್ಧದಲ್ಲಿ ಅವರನ್ನು ಸೋಲಿಸಿ, ಸೆರೆಹಿಡಿದು ಹಲಹ, ಹಾಬೋರ್, ಹಾರ ಮತ್ತು ಗೋಜಾನ್ ನದಿಯ ಸಮೀಪದ ಸ್ಥಳಕ್ಕೆ ಕೈದಿಗಳನ್ನಾಗಿ ಕೊಂಡೊಯ್ದರು. ಅಂದಿನಿಂದ ಇಂದಿನ ತನಕವೂ ಇಸ್ರೇಲರು ಆ ಸ್ಥಳಗಳಲ್ಲಿ ವಾಸಮಾಡುತ್ತಿರುವರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International