Beginning
ವಂಶಾವಳಿಗಳು-ಆದಾಮನಿಂದ ನೋಹನ ತನಕ
1 1-3 ಆದಾಮ್, ಶೇತ್, ಏನೋಷ್, ಕೇನಾನ್, ಮಹಲಲೇಲ್, ಯೆರೆದ್, ಹನೋಕ್, ಮೆತೂಷೆಲಹ, ಲೆಮೆಕ್ ಮತ್ತು ನೋಹ.
4 ನೋಹನ ಮಕ್ಕಳು ಯಾರೆಂದರೆ: ಶೇಮ್, ಹಾಮ್ ಮತ್ತು ಯೆಫೆತ್.
ಯೆಫೆತನ ಸಂತತಿಯವರು
5 ಯೆಫೆತನ ಗಂಡುಮಕ್ಕಳು: ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್.
6 ಗೋಮೆರನ ಗಂಡುಮಕ್ಕಳು: ಅಷ್ಕೆನಜ್, ರೀಫತ್ ಮತ್ತು ತೊಗರ್ಮ.
7 ಯಾವಾನನ ಗಂಡುಮಕ್ಕಳು: ಎಲೀಷ, ತಾರ್ಷೀಷ್, ಕಿತ್ತೀಮ್ ಮತ್ತು ದೋದಾನೀಮ್.
ಹಾಮನ ಸಂತತಿಯವರು
8 ಹಾಮನ ಸಂತತಿಯವರು ಯಾರೆಂದರೆ: ಕೂಷ್, ಮಿಚ್ರಯಿಮ್, ಪೂಟ್ ಮತ್ತು ಕಾನಾನ್.
9 ಕೂಷನ ಸಂತತಿಯವರು: ಸೆಬ, ಹವೀಲ, ಸಬ್ತ, ರಮ್ಮ ಮತ್ತು ಸಬ್ತೆಕ.
ರಮ್ಮನ ಸಂತತಿಯವರು: ಶೆಬ ಮತ್ತು ದೆದಾನ್.
10 ಕೂಷನ ಸಂತತಿಯವನಾದ ನಿಮ್ರೋದನು ದೊಡ್ಡವನಾಗಿ ಪ್ರಖ್ಯಾತ ರಣವೀರನಾದನು. ಲೋಕದೊಳಗೆ ಅವನಂಥವನು ಯಾರೂ ಇರಲಿಲ್ಲ.
11 ಮಿಚ್ರಯಿಮ್ಯನು ಲೂದ್ಯರಿಗೂ ಅನಾಮ್ಯರಿಗೂ ಲೆಹಾಬ್ಯರಿಗೂ ನಫ್ತುಹ್ಯರಿಗೂ 12 ಪತ್ರುಸ್ಯರಿಗೂ ಕಸ್ಲುಹ್ಯರಿಗೂ ಕಪ್ತೋರ್ಯರಿಗೂ ಮೂಲಪಿತೃ. ಫಿಲಿಷ್ಟಿಯರು ಕಸ್ಲುಹ್ಯರಿಂದ ಬಂದವರು.
13 ಕಾನಾನನು ಸೀದೋನನ ತಂದೆ. ಸೀದೋನನು ಅವನ ಚೊಚ್ಚಲಮಗನು. ಕಾನಾನನು ಹಿತ್ತೀಯರ ಮೂಲಪಿತೃ. 14 ಇದಲ್ಲದೆ ಯೆಬೂಸಿಯರಿಗೆ, ಅಮೋರಿಯರಿಗೆ, ಗಿರ್ಗಾಷಿಯರಿಗೆ, 15 ಹಿವ್ವಿಯರಿಗೆ, ಅರ್ಕಿಯರಿಗೆ, ಸೀನಿಯರಿಗೆ, 16 ಅರ್ವಾದಿಯರಿಗೆ, ಚೆಮಾರಿಯರಿಗೆ ಮತ್ತು ಹಮಾತಿಯರಿಗೆ ಕಾನಾನನು ಮೂಲಪಿತೃವಾಗಿದ್ದನು.
ಶೇಮನ ಸಂತತಿಯವರು
17 ಶೇಮನ ಗಂಡುಮಕ್ಕಳು ಯಾರೆಂದರೆ: ಏಲಾಮ್, ಅಶ್ಯೂರ್, ಅರ್ಪಕ್ಷದ್, ಲೂದ್ ಮತ್ತು ಅರಾಮ್. ಅರಾಮನ ಮಕ್ಕಳು ಯಾರೆಂದರೆ: ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್.
18 ಅರ್ಪಕ್ಷದನು ಶೆಲಹನನ್ನು ಪಡೆದನು. ಶೆಲಹನು ಏಬೆರನನ್ನು ಪಡೆದನು.
19 ಏಬೆರನಿಗೆ ಇಬ್ಬರು ಮಕ್ಕಳಿದ್ದರು. ಒಬ್ಬನ ಹೆಸರು ಪೆಲೆಗ್. ಇವನ ಜೀವಮಾನಕಾಲದಲ್ಲಿ ಭೂಲೋಕದ ಜನರು ತಮ್ಮತಮ್ಮ ಭಾಷೆಗನುಸಾರವಾಗಿ ಗುಂಪುಗುಂಪಾಗಿ ಪ್ರತ್ಯೇಕವಾದರು. ಪೆಲೆಗನ ತಮ್ಮನ ಹೆಸರು ಯೊಕ್ತಾನ್. 20 ಇವನ ಗಂಡುಮಕ್ಕಳು: ಅಲ್ಮೋದಾದ್, ಶೆಲೆಫ್, ಹಚರ್ಮಾವೆತ್, ಯೆರಹ, 21 ಹದೋರಾಮ್, ಊಜಾಲ್, ದಿಕ್ಲ, 22 ಏಬಾಲ್, ಅಬೀಮಾಯೇಲ್, ಶೆಬಾ, 23 ಓಫೀರ್, ಹವೀಲಾ ಮತ್ತು ಯೋಬಾಬ್.
24 ಶೇಮನ ಸಂತತಿಯವರು ಯಾರೆಂದರೆ: ಅರ್ಪಕ್ಷದ್, ಶೆಲಹ, 25 ಏಬೆರ್, ಪೆಲೆಗ್, ರೆಯೂ, 26 ಸೆರೂಗ್, ನಾಹೋರ್, ತೆರಹ, 27 ಮತ್ತು ಅಬ್ರಾಮ. (ಇವನನ್ನು ಅಬ್ರಹಾಮ ಎಂತಲೂ ಕರೆಯುತ್ತಿದ್ದರು.)
ಅಬ್ರಹಾಮನ ಸಂತತಿಯವರು
28 ಅಬ್ರಹಾಮನ ಗಂಡುಮಕ್ಕಳು: ಇಸಾಕ್ ಮತ್ತು ಇಷ್ಮಾಯೇಲ್, 29 ಇವರು ಅಬ್ರಹಾಮನ ಸಂತತಿಯವರು.
ಇಷ್ಮಾಯೇಲನ ಮೊದಲನೇ ಮಗ ನೆಬಾಯೋತನು. ಅವನ ಇತರ ಗಂಡುಮಕ್ಕಳು ಯಾರೆಂದರೆ: ಕೇದಾರ್, ಅದ್ಬೆಯೇಲ್, ಮಿಬ್ಸಾಮ್, 30 ಮಿಷ್ಮ, ದೂಮ, ಮಸ್ಸ, ಹದದ್, ತೇಮ, 31 ಯೆ ಟೂರ್, ನಾಫೀಷ್ ಮತ್ತು ಕೇದೆಮ. ಇವರೇ ಇಷ್ಮಾಯೇಲನ ಮಕ್ಕಳು.
32 ಕೆಟೂರಳು ಅಬ್ರಹಾಮನ ದಾಸಿಯಾಗಿದ್ದಳು. ಆಕೆಗೆ ಅಬ್ರಹಾಮನಲ್ಲಿ ಹುಟ್ಟಿದ ಗಂಡುಮಕ್ಕಳು ಯಾರೆಂದರೆ: ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್ ಮತ್ತು ಶೂಹ.
ಯೊಕ್ಷಾನನ ಮಕ್ಕಳು ಯಾರೆಂದರೆ: ಶೆಬ ಮತ್ತು ದೆದಾನ್.
33 ಮಿದ್ಯಾನನ ಗಂಡುಮಕ್ಕಳು ಯಾರೆಂದರೆ: ಏಫ, ಏಫೆರ್, ಹನೋಕ್, ಅಬೀದ ಮತ್ತು ಎಲ್ದಾಯ. ಇವರು ಕೆಟೂರಳ ಸಂತತಿಯವರು.
ಸಾರಳ ಗಂಡುಮಕ್ಕಳು
34 ಅಬ್ರಹಾಮನು ಇಸಾಕನ ತಂದೆ. ಇಸಾಕನ ಗಂಡುಮಕ್ಕಳು ಯಾರೆಂದರೆ: ಏಸಾವ ಮತ್ತು ಇಸ್ರೇಲ್.
35 ಏಸಾವನ ಗಂಡುಮಕ್ಕಳು ಯಾರೆಂದರೆ: ಏಲೀಫಜ್, ರೆಯೂವೇಲ್, ಯೆಯೂಷ್, ಯಳಾಮ್ ಮತ್ತು ಕೋರಹ.
36 ಎಲೀಫಜನ ಗಂಡುಮಕ್ಕಳು ಯಾರೆಂದರೆ: ತೇಮಾನ್, ಓಮಾರ್, ಚೆಫೀ, ಗತಾಮ್ ಮತ್ತು ಕೆನಜ್. ಅವನಿಗೆ ತಿಮ್ನಳಲ್ಲಿ ಹುಟ್ಟಿದ ಅಮಾಲೇಕ್ ಎಂಬ ಒಬ್ಬ ಮಗನಿದ್ದನು.
37 ರೆಯೂವೇಲನ ಗಂಡುಮಕ್ಕಳು ಯಾರೆಂದರೆ: ನಹತ್, ಜೆರಹ, ಶಮ್ಮ ಮತ್ತು ಮಿಜ್ಜ.
ಸೇಯಾರನ ಎದೋಮ್ಯರು
38 ಸೇಯಾರನ ಗಂಡುಮಕ್ಕಳು ಯಾರೆಂದರೆ: ಲೋಟಾನ್, ಶೋಬಾಲ್, ಚಿಬ್ಬೋನ್, ಅನಾಹ, ದೀಶೋನ್, ಏಚೆರ್ ಮತ್ತು ದೀಶಾನ್.
39 ಲೋಟಾನನ ಗಂಡುಮಕ್ಕಳು ಯಾರೆಂದರೆ: ಹೋರೀ ಮತ್ತು ಹೋಮಾಮ್. ಲೋಟಾನನಿಗೆ ತಿಮ್ನ ಎಂಬ ಒಬ್ಬ ಸಹೋದರಿಯೂ ಇದ್ದಳು.
40 ಶೋಬಾಲನ ಮಕ್ಕಳು ಯಾರೆಂದರೆ: ಅಲ್ಯಾನ್, ಮಾನಹತ್, ಏಬಾಲ್, ಶೆಫೀ ಮತ್ತು ಓನಾಮ್.
ಚಿಬ್ಬೋನನ ಮಕ್ಕಳು ಯಾರೆಂದರೆ: ಅಯ್ಯಾಹ ಮತ್ತು ಅನಾಹ.
41 ದೀಶೋನನು ಅನಾಹನ ಮಗನು.
ದೀಶೋನನು ಹಮ್ರಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್ ಎಂಬವರನ್ನು ಪಡೆದನು.
42 ಏಚೆರನ ಮಕ್ಕಳು ಯಾರೆಂದರೆ: ಬಿಲ್ಹಾನ್, ಜಾವಾನ್ ಮತ್ತು ಯಾಕಾನ್.
ದೀಶಾನನ ಮಕ್ಕಳು: ಊಚ್ ಮತ್ತು ಅರಾನ್.
ಎದೋಮ್ಯರ ಅರಸರು
43 ಇಸ್ರೇಲರಲ್ಲಿ ಅರಸುಗಳು ಪ್ರಾರಂಭವಾಗುವದಕ್ಕಿಂತ ಮುಂಚೆ ಎದೋಮ್ಯರಲ್ಲಿ ಅರಸರಿದ್ದರು. ಅವರು ಯಾರೆಂದರೆ: ಮೊದಲನೇ ಅರಸನಾದ ಬೆಳ.
ಇವನು ಬೆಯೋರನ ಮಗನು. ದಿನ್ಹಾಬಾ ಎಂಬುದು ಬೆಳನ ಪಟ್ಟಣವಾಗಿತ್ತು.
44 ಬೆಳನು ಸತ್ತಾಗ ಜೆರಹನ ಮಗನಾದ ಯೋಬಾಬನು ಅರಸನಾದನು. ಇವನು ಬೊಚ್ರ ಎಂಬ ಊರಿನವನು.
45 ಯೋಬಾಬ ಅರಸನು ಸತ್ತಾಗ ತೇಮಾನೀಯರ ದೇಶದವನಾದ ಹೂಷಾಮನು ಅರಸನಾದನು.
46 ಹೂಷಾಮನು ಸತ್ತಾಗ ಬೆದದನ ಮಗನಾದ ಹದದನು ಅರಸನಾದನು. ಇವನು ಮೋವಾಬ್ ದೇಶದಲ್ಲಿ ಮಿದ್ಯಾನರನ್ನು ಸೋಲಿಸಿದನು. ಹದದನ ಪಟ್ಟಣ ಅವೀತ್ ಆಗಿತ್ತು.
47 ಹದದನು ಮರಣ ಹೊಂದಿದ ನಂತರ ಮಸ್ರೇಕ ಊರಿನ ಸಮ್ಲಾಹನು ಅರಸನಾದನು.
48 ಸಮ್ಲಾಹನು ಸತ್ತಾಗ ಯೂಫ್ರೇಟೀಸ್ ನದಿ ಬಳಿಯ ರೆಹೋಬೋತ್ ಎಂಬ ಊರಿನ ಸೌಲ ಎಂಬವನು ಅರಸನಾದನು.
49 ಸೌಲನು ಸತ್ತಾಗ ಅಕ್ಬೋರನ ಮಗನಾದ ಬಾಳ್ಹಾನಾನನು ಅರಸನಾದನು.
50 ಬಾಳ್ಹಾನಾನನು ಸತ್ತಾಗ ಹದದನು ಅರಸನಾದನು. ಈತನು ಪಾಗೀ ಎಂಬ ನಗರವನ್ನು ಕಟ್ಟಿದನು. ಮೆಹೇಟಬೇಲ್ ಎಂಬಾಕೆ ಹದದನ ಹೆಂಡತಿ. ಈಕೆ ಮೆಟ್ರೇದಳ ಮಗಳು ಮತ್ತು ಮೇಜಾಹಾಬನ ಮೊಮ್ಮಗಳು. 51 ಹದದನು ಸತ್ತನು.
ಎದೋಮ್ಯರ ನಾಯಕರು ಯಾರೆಂದರೆ: ತಿಮ್ನ, ಅಲ್ಯ, ಯೆತೇತ್, 52 ಒಹೋಲಿಬಾಮ, ಏಲ, ಪೀನೋನ್, 53 ಕೆನಜ್, ತೇಮಾನ್, ಮಿಬ್ಚಾರ್, 54 ಮಗ್ದೀಯೇಲ್ ಮತ್ತು ಗೀರಾಮ್. ಇದು ಎದೋಮ್ಯರ ನಾಯಕರುಗಳ ಪಟ್ಟಿ.
ಇಸ್ರೇಲನ ಗಂಡುಮಕ್ಕಳು
2 ಇಸ್ರೇಲನ ಗಂಡುಮಕ್ಕಳು ಯಾರೆಂದರೆ: ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್, 2 ದಾನ್, ಯೋಸೇಫ್, ಬೆನ್ಯಾಮೀನ್, ನಫ್ತಾಲಿ, ಗಾದ್ ಮತ್ತು ಅಶೇರ್.
ಯೆಹೂದನ ಗಂಡುಮಕ್ಕಳು
3 ಯೆಹೂದನ ಗಂಡುಮಕ್ಕಳು ಯಾರೆಂದರೆ: ಏರ್, ಓನಾನ್ ಮತ್ತು ಶೆಲಾಹ. ಬತ್ಷೂವಳು ಇವರ ತಾಯಿ. ಈಕೆ ಕಾನಾನ್ಯಳು. ಯೆಹೂದನ ಚೊಚ್ಚಲ ಮಗ ಏರ್. ಯೆಹೋವನ ದೃಷ್ಟಿಯಲ್ಲಿ ಇವನು ಕೆಟ್ಟವನಾಗಿದ್ದ ಕಾರಣ ಕೊಲ್ಲಲ್ಪಟ್ಟನು. 4 ಯೆಹೂದನ ಸೊಸೆಯಾಗಿದ್ದ ತಾಮಾರಳು ಯೆಹೂದನಿಂದ ಪೆರೆಚ್ ಮತ್ತು ಜೆರಹ ಎಂಬ ಇಬ್ಬರು ಗಂಡುಮಕ್ಕಳನ್ನು ಹೆತ್ತಳು. ಹೀಗೆ ಯೆಹೂದನಿಗೆ ಐದು ಗಂಡುಮಕ್ಕಳಾದವು.
5 ಪೆರೆಚನ ಗಂಡುಮಕ್ಕಳು ಯಾರೆಂದರೆ: ಹೆಚ್ರೋನ್ ಮತ್ತು ಹಾಮೂಲ್.
6 ಜೆರಹನಿಗೆ ಐದು ಗಂಡುಮಕ್ಕಳು. ಅವರು ಯಾರೆಂದರೆ: ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್ ಮತ್ತು ದಾರ.
7 (ಕರ್ಮೀಯು ಜಿಮ್ರಿಯ ಮಗನು.) ಜಿಮ್ರಿಯು ಆಕಾನನ ಮಗನು. ಈ ಆಕಾನನು ಯುದ್ಧದಲ್ಲಿ ಮೀಸಲಾದ ವಸ್ತುಗಳನ್ನು ಕದ್ದುಕೊಂಡು ಇಸ್ರೇಲರಿಗೆ ದೊಡ್ಡ ಆಪತ್ತನ್ನು ತಂದವನು.
8 ಅಜರ್ಯನು ಏತಾನನ ಮಗನು.
9 ಹೆಚ್ರೋನನ ಗಂಡುಮಕ್ಕಳು ಯಾರೆಂದರೆ: ಯೆರಹ್ಮೇಲ್, ರಾಮ್ ಮತ್ತು ಕಾಲೇಬ್.
ರಾಮನ ಸಂತತಿಯವರು
10 ರಾಮನು ಅಮ್ಮೀನಾದಾಬನ ತಂದೆ. ಇವನು ನಹಶೋನನ ತಂದೆ. ನಹಶೋನನು ಯೆಹೂದ ಕುಲದ ನಾಯಕನಾಗಿದ್ದನು. 11 ನಹಶೋನನು ಸಲ್ಮೋನನ ತಂದೆ. ಸಲ್ಮೋನನು ಬೋವಜನ ತಂದೆ. 12-13 ಬೋವಜನು ಓಬೇದನ ತಂದೆ. ಓಬೇದನು ಇಷಯನ ತಂದೆ. ಇಷಯನು ಎಲೀಯಾಬನ ತಂದೆ. ಎಲೀಯಾಬನು ಇಷಯನ ಚೊಚ್ಚಲಮಗನು; ಎರಡನೆಯವನು ಅಬೀನಾದಾಬ್; ಮೂರನೆಯವನು ಶಿಮ್ಮ; 14 ನಾಲ್ಕನೆಯವನು ನೆತನೇಲ್, ಐದನೆಯವನು ರದ್ದೈ 15 ಆರನೆಯವನು ಓಚೆಮ್, ಏಳನೆಯವನು ದಾವೀದ. 16 ಅವರ ತಂಗಿಯಂದಿರು ಯಾರೆಂದರೆ, ಚೆರೂಯ ಮತ್ತು ಅಬೀಗೈಲ್, ಚೆರೂಯಳ ಮೂರುಮಕ್ಕಳು ಯಾರೆಂದರೆ, ಅಬ್ಷೈ, ಯೋವಾಬ್ ಮತ್ತು ಅಸಾಹೇಲ್. 17 ಅಬೀಗೈಲಳು ಅಮಾಸನ ತಾಯಿ. ಅಮಾಸನ ತಂದೆ ಯೆತೆರ್, ಇವನು ಇಷ್ಮಾಯೇಲ್ಯನು.
ಕಾಲೇಬನ ಸಂತತಿಯವರು
18 ಕಾಲೇಬನು ಹೆಚ್ರೋನನ ಮಗನು. ಅವನ ಹೆಂಡತಿಯಾದ ಅಜೂಬಳಲ್ಲಿ ಅವನಿಗೆ ಹುಟ್ಟಿದ ಗಂಡುಮಕ್ಕಳು ಯಾರೆಂದರೆ, ಯೇಷೆರ್, ಶೋಬಾಬ್ ಮತ್ತು ಅರ್ದೋನ್. 19 ಅಜೂಬಳು ಸತ್ತ ಮೇಲೆ ಕಾಲೇಬನು ಎಫ್ರಾತಳನ್ನು ಮದುವೆಯಾದನು. ಅವರಿಗೆ ಹೂರ್ ಎಂಬ ಮಗನು ಹುಟ್ಟಿದನು. 20 ಹೂರನು ಊರಿಯನ ತಂದೆ. ಊರಿಯು ಬೆಚಲೇಲನ ತಂದೆ.
21 ಹೆಚ್ರೋನನು ಅರವತ್ತು ವರ್ಷ ಪ್ರಾಯದವನಾದಾಗ ಗಿಲ್ಯಾದನ ತಂದೆಯಾದ ಮಾಕೀರನ ಮಗಳನ್ನು ಮದುವೆಯಾದನು. ಆಕೆಯಲ್ಲಿ ಹೆಚ್ರೋನನು ಸೆಗೂಬನನ್ನು ಪಡೆದಳು. 22 ಸೆಗೂಬನು ಯಾಯೀರನ ತಂದೆ. ಇವನಿಗೆ ಗಿಲ್ಯಾದ್ ಪ್ರಾಂತ್ಯದಲ್ಲಿ ಇಪ್ಪತ್ತಮೂರು ಪಟ್ಟಣಗಳಿದ್ದವು. 23 ಆದರೆ ಗೆಷೂರ್ ಮತ್ತು ಅರಾಮನು ಯಾಯೀರನ ಊರುಗಳನ್ನು ವಶಪಡಿಸಿಕೊಂಡರು. ಅದರಲ್ಲಿ ಕೆನತ್ ಮತ್ತು ಅದರ ಸುತ್ತಮುತ್ತಲಿದ್ದ ಕೆಲವು ಹಳ್ಳಿಗಳು ಸೇರಿದ್ದವು. ಒಟ್ಟು ಅರವತ್ತು ಸಣ್ಣ ಪಟ್ಟಣಗಳಿದ್ದವು. ಇವೆಲ್ಲವೂ ಗಿಲ್ಯಾದನ ತಂದೆಯಾದ ಮಾಕೀರನಿಗೆ ಸೇರಿದವುಗಳಾಗಿದ್ದವು.
24 (ಹೆಚ್ರೋನನ ಹೆಂಡತಿ ಅಬೀಯ.) ಹೆಚ್ರೋನನು ಕಾಲೇಬ್ ಎಫ್ರಾತದಲ್ಲಿ ಸತ್ತನು. ಅವನ ಮರಣದನಂತರ ಅಬೀಯಳು ಅವನಿಗೆ ಅಷ್ಹೂರ್ ಎಂಬ ಮಗನನ್ನು ಹೆತ್ತಳು. ಅಷ್ಹೂರನು ತೆಕೋವನ ತಂದೆ.
ಯೆರಹ್ಮೇಲನ ಸಂತತಿಯವರು
25 ಹೆಚ್ರೋನನ ಚೊಚ್ಚಲಮಗನು ಯೆರಹ್ಮೇಲ. ಇವನ ಗಂಡುಮಕ್ಕಳು ಯಾರೆಂದರೆ: ರಾಮ್, ಬೂನ, ಓರೆನ್, ಓಚೆಮ್ ಮತ್ತು ಅಹೀಯ. ರಾಮನು ಯೆರಹ್ಮೇಲನ ಚೊಚ್ಚಲಮಗನು. 26 ಯೆರಹ್ಮೇಲನ ಎರಡನೆಯ ಹೆಂಡತಿಯಾಗಿದ್ದ ಅಟಾರಳಲ್ಲಿ ಓನಾಮ್ ಹುಟ್ಟಿದನು.
27 ಯೆರಹ್ಮೇಲನ ಚೊಚ್ಚಲಮಗನಾದ ರಾಮನಿಗೆ ಮಾಚ್, ಯಾಮೀನ್ ಮತ್ತು ಏಕೆರ್ ಎಂಬ ಮಕ್ಕಳಿದ್ದರು.
28 ಓನಾಮನ ಗಂಡುಮಕ್ಕಳು ಯಾರೆಂದರೆ: ಶಮ್ಮೈ ಮತ್ತು ಯಾದ. ಶಮ್ಮೈಯ ಮಕ್ಕಳು: ನಾದಾಬ್ ಮತ್ತು ಅಬೀಷೂರ್.
29 ಅಬೀಷೂರನ ಹೆಂಡತಿಯ ಹೆಸರು ಅಬೀಹೈಲ್. ಇವರಿಗೆ ಅಹ್ಬಾನ್ ಮತ್ತು ಮೋಲೀದ್ ಎಂಬ ಗಂಡುಮಕ್ಕಳು ಇದ್ದರು.
30 ನಾದಾಬನ ಮಕ್ಕಳು ಯಾರೆಂದರೆ: ಸೆಲೆದ್ ಮತ್ತು ಅಪ್ಪಯಿಮ್. ಸೆಲೆದನು ಮಕ್ಕಳಿಲ್ಲದೆ ಸತ್ತನು.
31 ಅಪ್ಪಯಿಮನ ಮಗ ಇಷ್ಷೀ; ಇಷ್ಷೀಯ ಮಗನು ಶೇಷಾನ್; ಶೇಷಾನನ ಮಗ ಅಹ್ಲೈ.
32 ಶಮ್ಮ್ಯೆಯ ತಮ್ಮನ ಹೆಸರು ಯಾದ. ಇವನಿಗೆ ಯೆತೆರ್ ಮತ್ತು ಯೋನಾತಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದರು. ಯೆತೆರನು ಮಕ್ಕಳಿಲ್ಲದೆ ಸತ್ತನು.
33 ಯೋನಾತಾನನ ಗಂಡುಮಕ್ಕಳು: ಪೆಲೆತ್ ಮತ್ತು ಜಾಜ. ಇದು ಯೆರಹ್ಮೇಲನ ಮಕ್ಕಳ ಪಟ್ಟಿ.
34 ಶೇಷಾನನಿಗೆ ಗಂಡುಮಕ್ಕಳಿರಲಿಲ್ಲ. ಹೆಣ್ಣುಮಕ್ಕಳೇ ಇದ್ದರು. ಇವನಿಗೆ ಈಜಿಪ್ಟಿನ ಯರ್ಹ ಎಂಬ ಸೇವಕನು ಇದ್ದನು. 35 ಶೇಷಾನ ತನ್ನ ಮಗಳನ್ನು ಯರ್ಹನಿಗೆ ಕೊಟ್ಟು ಮದುವೆ ಮಾಡಿಸಿದನು. ಇವರಿಗೆ ಅತ್ತ್ಯೆ ಎಂಬ ಮಗನು ಹುಟ್ಟಿದನು.
36 ಅತ್ತ್ಯೆ ನಾತಾನನ ತಂದೆ. ನಾತಾನನು ಜಾಬಾದನ ತಂದೆ. 37 ಜಾಬಾದನು ಎಫ್ಲಾಲನ ತಂದೆ. ಎಫ್ಲಾಲನು ಓಬೇದನ ತಂದೆ. 38 ಓಬೇದನು ಯೇಹೂವಿನ ತಂದೆ; ಯೇಹೂವು ಅಜರ್ಯನ ತಂದೆ. 39 ಅಜರ್ಯನು ಹೆಲೆಚನ ತಂದೆ; ಹೆಲೆಚನು ಎಲ್ಲಾಸನ ತಂದೆ. 40 ಎಲ್ಲಾಸನು ಸಿಸ್ಮೈನ ತಂದೆ; ಸಿಸ್ಮೈನು ಶಲ್ಲೂಮನ ತಂದೆ. 41 ಶಲ್ಲೂಮನು ಯೆಕಮ್ಯಾಹನ ತಂದೆ. ಯೆಕಮ್ಯಾಹನು ಎಲೀಷಾಮನ ತಂದೆ.
ಕಾಲೇಬನ ಕುಟುಂಬ
42 ಕಾಲೇಬನು ಯೆರಹ್ಮೇಲನ ತಮ್ಮ. ಅವನಿಗೆ ಕೆಲವು ಗಂಡುಮಕ್ಕಳಿದ್ದರು. ಚೊಚ್ಚಲಮಗನು ಮೇಷ. ಮೇಷನು ಜೀಫ್ಯನ ತಂದೆ. ಮಾರೇಷನು ಸಹ ಕಾಲೇಬನ ಮಗ. ಮಾರೇಷನು ಹೆಬ್ರೋನನ ತಂದೆ.
43 ಹೆಬ್ರೋನನ ಗಂಡುಮಕ್ಕಳು ಯಾರೆಂದರೆ: ಕೋರಹ, ತಪ್ಪೂಹ, ರೆಕೆಮ್ ಮತ್ತು ಶೆಮ. 44 ಶೆಮನ ಮಗನು ರಹಮ್ಯ. ರಹಮ್ಯನು ಯೊರ್ಕೆಯಾಮ್ಯನ ತಂದೆ. ರೆಕೆಮನು ಶಮ್ಮೈಯನ ತಂದೆ. 45 ಶಮ್ಮೈಯನ ಮಗ ಮಾವೋನ್, ಇವನ ಮಗನು ಬೇತ್ಸೂರ್.
46 ಕಾಲೇಬನ ದಾಸಿಯ ಹೆಸರು ಏಫ. ಈಕೆಯು ಹಾರಾನ್, ಮೋಚ ಮತ್ತು ಗಾಜೇಜನ ತಾಯಿ.
47 ಯಾದೈಯಳ ಗಂಡುಮಕ್ಕಳು ಯಾರೆಂದರೆ: ರೆಗೆಮ್, ಯೋತಾವ್, ಗೇಷಾನ್, ಪೆಲೆಟ್, ಏಫ ಮತ್ತು ಶಾಫ್.
48 ಮಾಕಳು ಕಾಲೇಬನ ಇನ್ನೊಬ್ಬ ದಾಸಿ. ಈಕೆ ಶೆಬೆರ್ ಮತ್ತು ತಿರ್ಹನ ಎಂಬವರ ತಾಯಿ. 49 ಈಕೆಯು ಶಾಫ್ ಮತ್ತು ಶೆವನ ತಾಯಿಯೂ ಆಗಿದ್ದಳು. ಶಾಫನ ಮಗ ಮದ್ಮನ್ನ. ಶೆವನು ಮಕ್‌ಬೇನ ಮತ್ತು ಗಿಬ್ಯನ ತಂದೆ. ಕಾಲೇಬನ ಮಗಳ ಹೆಸರು ಅಕ್ಸಾಹ.
50 ಇದು ಕಾಲೇಬನ ಸಂತತಿಯವರ ಪಟ್ಟಿ; ಕಾಲೇಬನ ಚೊಚ್ಚಲಮಗನು ಹೂರ. ಇವನು ಎಫ್ರಾತಳಿಗೆ ಹುಟ್ಟಿದವನು. ಹೂರನ ಗಂಡುಮಕ್ಕಳು ಯಾರೆಂದರೆ, ಕಿರ್ಯತ್ಯಾರೀಮ್ ಕಟ್ಟಿದವನಾದ ಶೋಬಾಲ್ ಮತ್ತು 51 ಬೆತ್ಲೆಹೇಮನ್ನು ಕಟ್ಟಿದವನಾದ ಸಲ್ಮ ಮತ್ತು ಬೇತ್ಗಾದೇರ್ ಕಟ್ಟಿದವನಾದ ಹಾರೇಫ್.
52 ಶೋಬಾಲನು ಕಿರ್ಯತ್ಯಾರೀಮನ್ನು ಕಟ್ಟಿದನು. ಇದು ಶೋಬಾಲನ ಸಂತತಿಯವರ ಪಟ್ಟಿ: ಹಾರೋಯೆ ಮತ್ತು ಮಾನಹತಿ ಊರಿನ ಅರ್ಧಜನರು; 53 ಮತ್ತು ಕಿರ್ಯತ್ಯಾರೀಮಿನ ಕುಟುಂಬದವರು. ಇವರು ಯೆತೆರಿಯರು, ಪೂತ್ಯರು, ಶುಮಾತ್ಯರು ಮತ್ತು ಮಿಷ್ರಾಗ್ಯರು. ಇವರಿಂದ ಚೊರ್ರಾತ್ಯರು ಮತ್ತು ಎಷ್ಟಾವೋಲ್ಯರು ಬಂದರು.
54 ಸಲ್ಮನ ಸಂತತಿಯವರ ಪಟ್ಟಿ: ಬೆತ್ಲೆಹೇಮಿನ ನಿವಾಸಿಗಳು, ನೆಟೋಫಾ, ಅಟರೋತ್, ಬೇತ್ಯೋವಾಬ್, ಮಾನಹತಿಯ ಅರ್ಧಜನರು, ಚೊರ್ಗಯಿತರು. 55 ಶಾಸ್ತ್ರಿಗಳ ಸಂತಾನ: ಯಾಬೇಚ್, ತಿರ್ರಾತ್ಯ, ಶಿಮ್ಗಾತ್ಯ ಮತ್ತು ಸೂಕಾತ್ಯ ಎಂಬ ಸ್ಥಳಗಳಲ್ಲಿ ವಾಸಿಸುವರು. ಇವರು ಹಮಾತಿನಿಂದ ಬಂದ ಕೇನ್ಯರು. ಬೆತ್‌ರೇಕಾಬನ್ನು ಹಮಾತನು ಸ್ಥಾಪಿಸಿದನು.
Kannada Holy Bible: Easy-to-Read Version. All rights reserved. © 1997 Bible League International