Print Page Options
Previous Prev Day Next DayNext

Beginning

Read the Bible from start to finish, from Genesis to Revelation.
Duration: 365 days
Kannada Holy Bible: Easy-to-Read Version (KERV)
Version
ಅರಣ್ಯಕಾಂಡ 1-2

ಮೋಶೆಯು ಇಸ್ರೇಲರನ್ನು ಲೆಕ್ಕಿಸಿದ್ದು

ಯೆಹೋವನು ದೇವದರ್ಶನಗುಡಾರದೊಳಗೆ ಮೋಶೆಯೊಡನೆ ಮಾತಾಡಿದನು. ಆಗ ದೇವದರ್ಶನಗುಡಾರವು ಸೀನಾಯಿ ಮರುಭೂಮಿಯಲ್ಲಿತ್ತು. ಇಸ್ರೇಲರು ಈಜಿಪ್ಟನ್ನು ಬಿಟ್ಟ ಎರಡನೆಯ ವರ್ಷದ ಎರಡನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಇದು ನಡೆಯಿತು. ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಇಸ್ರೇಲ್ ಜನರೆಲ್ಲರನ್ನು ಅವರವರ ಗೋತ್ರ ಕುಟುಂಬಗಳ ಪ್ರಕಾರ ಲೆಕ್ಕಿಸಿ ಪ್ರತಿಯೊಬ್ಬನ ಹೆಸರನ್ನೂ ಪಟ್ಟಿಮಾಡಿ, ನೀನೂ ಆರೋನನೂ ಇಸ್ರೇಲರಲ್ಲಿ ಎಲ್ಲಾ ಪುರುಷರನ್ನು ಲೆಕ್ಕಿಸಬೇಕು. ಇಸ್ರೇಲ್ ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸುಳ್ಳ ಪುರುಷರನ್ನು ಲೆಕ್ಕಿಸು. ಅವರನ್ನು ಅವರವರ ವಿಭಾಗಗಳಿಗೆ ಅನುಸಾರವಾಗಿ ಪಟ್ಟಿಮಾಡು. ಪ್ರತಿಯೊಂದು ಕುಲದ ಕುಟುಂಬದ ನಾಯಕನು ನಿಮಗೆ ಸಹಾಯಮಾಡಬೇಕು ನಿಮ್ಮೊಡನಿದ್ದು ನಿಮಗೆ ಸಹಾಯಮಾಡುವ ಪುರುಷರು ಯಾರೆಂದರೆ:

ರೂಬೇನ್ ಕುಲದಿಂದ ಶೆದೇಯೂರನ ಮಗನಾದ ಎಲೀಚೂರ್.

ಸಿಮೆಯೋನ್ ಕುಲದಿಂದ ಚೂರೀಷದ್ದೈಯ ಮಗನಾದ ಶೆಲುಮೀಯೇಲ್;

ಯೆಹೂದ ಕುಲದಿಂದ ಅಮ್ಮೀನಾದಾಬನ ಮಗನಾದ ನಹಶೋನ್;

ಇಸ್ಸಾಕಾರ್ ಕುಲದಿಂದ ಚೂವಾರನ ಮಗನಾದ ನೆತನೇಲ್;

ಜೆಬುಲೂನ್ ಕುಲದಿಂದ ಹೇಲೋನನ ಮಗನಾದ ಎಲೀಯಾಬ್;

10 ಯೋಸೇಫನ ಸಂತಾನದಿಂದ:

ಎಫ್ರಾಯೀಮ್ ಕುಲದಿಂದ ಅಮ್ಮೀಹೂದನ ಮಗನಾದ ಎಲೀಷಾಮಾ;

ಮನಸ್ಸೆ ಕುಲದಿಂದ ಪೆದಾಚೂರನ ಮಗನಾದ ಗಮ್ಲೀಯೇಲ್;

11 ಬೆನ್ಯಾಮೀನ್ ಕುಲದಿಂದ ಗಿದ್ಯೋನಿಯ ಮಗನಾದ ಅಬೀದಾನ್;

12 ದಾನ್ ಕುಲದಿಂದ ಅಮ್ಮಾಷದ್ದೈಯ ಮಗನಾದ ಅಹೀಗೆಜೆರ್;

13 ಆಶೇರ್ ಕುಲದಿಂದ ಒಕ್ರಾನನ ಮಗನಾದ ಪಗೀಯೇಲ್;

14 ಗಾದ್ ಕುಲದಿಂದ ರೆಗೂವೇಲನ ಮಗನಾದ ಎಲ್ಯಾಸಾಫ್;

15 ನಫ್ತಾಲಿ ಕುಲದಿಂದ ಏನಾನನ ಮಗನಾದ ಅಹೀರ.”

16 ಸರ್ವಸಮೂಹದವರೊಳಗಿಂದ ಆರಿಸಲ್ಪಟ್ಟಿದ್ದ ಇವರು ತಮ್ಮ ಪೂರ್ವಿಕರ ಕುಲಗಳಿಗೆ ನಾಯಕರು ಮತ್ತು ಇಸ್ರೇಲರಿಗೆ ಸಹಸ್ರಾಧಿಪತಿಗಳಾಗಿದ್ದರು. 17 ಹೆಸರೆಸರಾಗಿ ಆರಿಸಲ್ಪಟ್ಟ ಈ ಜನರನ್ನು ಮೋಶೆ ಆರೋನರು ತೆಗೆದುಕೊಂಡರು. 18 ಎರಡನೆ ತಿಂಗಳಿನ ಮೊದಲನೆ ದಿನದಲ್ಲಿ ಎಲ್ಲಾ ಜನರು ಒಟ್ಟಾಗಿ ಸೇರಿಬಂದರು. ಜನರು ತಮ್ಮತಮ್ಮ ಕುಟುಂಬಗಳಿಗನುಸಾರವಾಗಿ, ಗೋತ್ರಗಳಿಗನುಸಾರವಾಗಿ ಪಟ್ಟಿ ಮಾಡಿಸಿದರು. ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು.

19 ಯೆಹೋವನು ಆಜ್ಞಾಪಿಸಿದ ಪ್ರಕಾರವೇ ಮೋಶೆಯು ಮಾಡಿದನು. ಜನರು ಸೀನಾಯಿ ಮರುಭೂಮಿಯಲ್ಲಿದ್ದಾಗ ಮೋಶೆಯು ಅವರನ್ನು ಲೆಕ್ಕಿಸಿದನು.

20 ಅವರು ಇಸ್ರೇಲನ ಚೊಚ್ಚಲ ಮಗನಾದ ರೂಬೇನ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿ ಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ ಮತ್ತು ಕುಟುಂಬಗಳಿಗನುಸಾರವಾಗಿ ಹೆಸರುಗಳನ್ನು ಪಟ್ಟಿಮಾಡಲಾಯಿತು. 21 ರೂಬೇನ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 46,500.

22 ಅವರು ಸಿಮೆಯೋನ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ ಮತ್ತು ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 23 ಸಿಮೆಯೋನ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 59,300.

24 ಗಾದ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ ಮತ್ತು ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 25 ಗಾದ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 45,650.

26 ಯೆಹೂದನ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿಯೂ ಕುಟುಂಬಗಳಿಗನುಸಾರವಾಗಿಯೂ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 27 ಯೆಹೂದನ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 74,600.

28 ಇಸ್ಸಾಕಾರ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 29 ಇಸ್ಸಾಕಾರ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 54,400.

30 ಜೆಬುಲೂನ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 31 ಜೆಬುಲೂನ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 57,400.

32 ಯೋಸೇಫನ ಮಗನಾದ ಎಫ್ರಾಯೀಮ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 33 ಎಫ್ರಾಯೀಮ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 40,500.

34 ಯೋಸೇಫನ ಮಗನಾದ ಮನಸ್ಸೆಯ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 35 ಮನಸ್ಸೆ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 32,200.

36 ಬೆನ್ಯಾಮೀನ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 37 ಬೆನ್ಯಾಮೀನನ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 35,400.

38 ದಾನ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 39 ದಾನನ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 62,700.

40 ಆಶೇರ್ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 41 ಆಶೇರ್ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 41,500.

42 ನಫ್ತಾಲಿ ಕುಲದವರನ್ನು ಲೆಕ್ಕಿಸಿದರು. ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಎಲ್ಲಾ ಪುರುಷರ ಹೆಸರುಗಳನ್ನು ಪಟ್ಟಿಮಾಡಲಾಯಿತು. ಅವರವರ ಕುಲಗಳಿಗನುಸಾರವಾಗಿ, ಕುಟುಂಬಗಳಿಗನುಸಾರವಾಗಿ ಅವರ ಹೆಸರುಗಳನ್ನು ಪಟ್ಟಿಮಾಡಲಾಯಿತು. 43 ನಫ್ತಾಲಿಯ ಕುಲದಲ್ಲಿ ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 53,400.

44 ಮೋಶೆ, ಆರೋನ ಮತ್ತು ಇಸ್ರೇಲರ ಹನ್ನೆರಡು ಮಂದಿ ನಾಯಕರು ಈ ಜನರನ್ನು ಲೆಕ್ಕಿಸಿದರು. (ಪ್ರತಿಯೊಬ್ಬ ನಾಯಕನು ತನ್ನ ಕುಲದ ಪ್ರತಿನಿಧಿಯಾಗಿದ್ದನು.) 45 ಅವರು ಸೈನ್ಯದಲ್ಲಿ ಸೇವೆಮಾಡಲು ಶಕ್ತರಾದ ಇಪ್ಪತ್ತು ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಪ್ರತಿ ಪುರುಷನನ್ನು ಲೆಕ್ಕಿಸಿದರು. ಪ್ರತಿಯೊಬ್ಬನೂ ಅವನ ಕುಟುಂಬದೊಡನೆ ಲೆಕ್ಕಿಸಲ್ಪಟ್ಟನು. 46 ಲೆಕ್ಕಿಸಲ್ಪಟ್ಟ ಪುರುಷರ ಒಟ್ಟು ಸಂಖ್ಯೆ 6,03,550.

47 ಆದರೆ ಲೇವಿ ಕುಲದ ಕುಟುಂಬಗಳು ಇತರ ಇಸ್ರೇಲರೊಡನೆ ಲೆಕ್ಕಿಸಲ್ಪಡಲಿಲ್ಲ. 48 ಯಾಕೆಂದರೆ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, 49 “ಲೇವಿ ಕುಲದ ಪುರುಷರನ್ನು ಲೆಕ್ಕಿಸಬೇಡ. ಅವರನ್ನು ಉಳಿದ ಇಸ್ರೇಲರ ಜನಗಣತಿಯೊಡನೆ ಸೇರಿಸಬಾರದು. 50 ಒಡಂಬಡಿಕೆಯ ಪವಿತ್ರ ಗುಡಾರವನ್ನು ನೋಡಿಕೊಳ್ಳುವ ಜವಾಬ್ದಾರಿಯು ಲೇವಿಯರಿಗೆ ಸೇರಿರುವುದರಿಂದ ಅವರಿಗೆ ಅದನ್ನು ತಿಳಿಸು. ಅವರು ಅದನ್ನೂ ಅದರ ಉಪಕರಣಗಳನ್ನೂ ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿಯೊಂದನ್ನೂ ನೋಡಿಕೊಳ್ಳಬೇಕು. ಅವರು ಪವಿತ್ರ ಗುಡಾರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಹೊತ್ತುಕೊಂಡು ಹೋಗಬೇಕು. ಅವರು ಅದರ ಸುತ್ತಲೂ ಪಾಳೆಯಮಾಡಿಕೊಂಡು ಅದನ್ನು ನೋಡಿಕೊಳ್ಳಬೇಕು. 51 ಪವಿತ್ರ ಗುಡಾರವನ್ನು ತೆಗೆದುಕೊಂಡು ಹೋಗುವಾಗಲೆಲ್ಲಾ ಲೇವಿಯರೇ ಅದನ್ನು ಬಿಚ್ಚಬೇಕು, ಇಳಿಸುವಾಗಲೆಲ್ಲಾ ಲೇವಿಯರೇ ಅದನ್ನು ಹಾಕಬೇಕು. ಪವಿತ್ರ ಗುಡಾರವನ್ನು ನೋಡಿಕೊಳ್ಳುವವರು ಅವರೇ. ಲೇವಿ ಕುಲಕ್ಕೆ ಸೇರದ ಯಾವನಾದರೂ ಅದರ ಸಮೀಪಕ್ಕೆ ಬಂದರೆ, ಅವನಿಗೆ ಮರಣಶಿಕ್ಷೆಯಾಗಬೇಕು. 52 ಇಸ್ರೇಲರ ಆಯಾ ಸೈನ್ಯಗಳು ತಮ್ಮತಮ್ಮ ಕುಲದ ಧ್ವಜ ಇರುವಲ್ಲಿಯೇ ಪಾಳೆಯ ಮಾಡಿಕೊಳ್ಳಬೇಕು. 53 ಆದರೆ ಲೇವಿಯರು ಮಾತ್ರ ಪವಿತ್ರ ಗುಡಾರದ ಸುತ್ತಲೂ ತಮ್ಮ ಪಾಳೆಯ ಮಾಡಿಕೊಳ್ಳಬೇಕು. ಹೀಗೆ ಲೇವಿಯರು ಒಡಂಬಡಿಕೆಯ ಪವಿತ್ರ ಗುಡಾರವನ್ನು ಕಾಯುವರು; ಇಸ್ರೇಲರಿಗೆ ಯಾವ ಕೇಡೂ ಸಂಭವಿಸದಂತೆ ಅವರು ಪವಿತ್ರ ಗುಡಾರವನ್ನು ಸಂರಕ್ಷಿಸುವರು.”

54 ಹೀಗೆ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದ ಪ್ರತಿಯೊಂದನ್ನು ಇಸ್ರೇಲರು ಮಾಡಿದರು.

ಪಾಳೆಯ ಮಾಡಿಕೊಳ್ಳುವ ಕ್ರಮ

ಯೆಹೋವನು ಮೋಶೆ ಆರೋನರಿಗೆ ಹೇಳಿದ್ದೇನೆಂದರೆ: “ಇಸ್ರೇಲರು ದೇವದರ್ಶನಗುಡಾರದ ಸುತ್ತಲೂ ಸ್ವಲ್ಪ ದೂರದಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಪ್ರತಿಯೊಬ್ಬನು ತನ್ನತನ್ನ ಗೋತ್ರಧ್ವಜದ ಹತ್ತಿರ ತನ್ನತನ್ನ ದಂಡಿನಲ್ಲೇ ಇಳಿದುಕೊಳ್ಳಬೇಕು.

“ವಿಭಾಗಗಳಿಗನುಸಾರವಾಗಿ ತಮ್ಮತಮ್ಮ ಸ್ವಂತ ಧ್ವಜಗಳೊಡನೆ ಮುನ್ನಡೆಯುವ ಯೆಹೂದ ಮತ್ತು ಅದರ ಗೋತ್ರಗಳವರು ದೇವದರ್ಶನಗುಡಾರದ ಪೂರ್ವದಿಕ್ಕಿನಲ್ಲಿ ಪಾಳೆಯ ಮಾಡಿಕೊಳ್ಳಬೇಕು. ಯೆಹೂದ ಕುಲದವರ ನಾಯಕನು ಅಮ್ಮೀನಾದಾಬನ ಮಗನಾದ ನಹಶೋನ. ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 74,600 ಮಂದಿ.

“ಇಸ್ಸಾಕಾರ್ ಕುಲದವರು ಯೆಹೂದ ಕುಲದವರ ನಂತರ ಪಾಳೆಯ ಹಾಕುವರು. ಇಸ್ಸಾಕಾರನ ಕುಲದವರ ನಾಯಕನು ಚೂವಾರನ ಮಗನಾದ ನೆತನೇಲ್. ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 54,400 ಮಂದಿ.

“ಜೆಬುಲೂನ್ ಕುಲದವರು ಸಹ ಯೆಹೂದ ಕುಲದವರ ನಂತರ ಪಾಳೆಯ ಹಾಕುವರು. ಜೆಬುಲೂನ್ ಕುಲದ ನಾಯಕನು ಹೇಲೋನನ ಮಗನಾದ ಎಲೀಯಾಬ್. ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 57,400 ಮಂದಿ.

“ಯೆಹೂದ ಪಾಳೆಯದಲ್ಲಿ ಮತ್ತು ಅದರೊಡನೆ ಮುನ್ನಡೆಯುವ ಗೋತ್ರಗಳವರ ಒಟ್ಟು ಸೈನಿಕರು 1,86,400 ಮಂದಿ. ಇವರೆಲ್ಲರು ವಿಭಾಗಗಳಿಗನುಸಾರವಾಗಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಂಡವರು. ಇಸ್ರೇಲರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ, ಯೆಹೂದ ಕುಲವು ಮತ್ತು ಅದರೊಂದಿಗಿರುವ ಎರಡು ಕುಲಗಳವರು ಮೊದಲು ಹೊರಡುವರು.

10 “ರೂಬೇನ್ ಕುಲ ಮತ್ತು ಅದರೊಡನೆ ಮುನ್ನಡೆಯುವ ಕುಲಗಳು ದೇವದರ್ಶನಗುಡಾರದ ದಕ್ಷಿಣದಿಕ್ಕಿನಲ್ಲಿ ತಮ್ಮ ಧ್ವಜಗಳೊಡನೆ ವಿಭಾಗಗಳಿನುಸಾರವಾಗಿ ಪಾಳೆಯಮಾಡಿಕೊಳ್ಳಬೇಕು. ರೂಬೇನ್ ಕುಲದವರ ನಾಯಕನು ಶೆದೇಯೂರನ ಮಗನಾದ ಎಲೀಚೂರನು; 11 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 46,500 ಮಂದಿ.

12 “ರೂಬೇನ್ ಕುಲದವರ ಪಕ್ಕದಲ್ಲಿ ಸಿಮೆಯೋನ್ ಕುಲದವರು ಪಾಳೆಯ ಹಾಕುವರು. ಸಿಮೆಯೋನ್ ಕುಲದವರ ನಾಯಕನು ಚೂರೀಷದ್ದೈನ ಮಗನಾದ ಶೆಲುಮೀಯೇಲ. 13 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 59,300 ಮಂದಿ.

14 “ಗಾದ್ ಕುಲವು ಸಹ ರೂಬೇನ್ ಕುಲದ ಪಕ್ಕದಲ್ಲಿ ಪಾಳೆಯ ಮಾಡಿಕೊಳ್ಳಬೇಕು. ಗಾದನ ಕುಲದವರ ನಾಯಕನು ರೆಗೂವೇಲನ ಮಗನಾದ ಎಲ್ಯಾಸಾಫ್. 15 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 45,650 ಮಂದಿ.

16 “ರೂಬೇನ್ ಪಾಳೆಯದಲ್ಲಿರುವ ಎಲ್ಲಾ ತಂಡಗಳಲ್ಲಿರುವ ಒಟ್ಟು ಸೈನಿಕರು 1,51,450 ಮಂದಿ. ಇವರೆಲ್ಲರೂ ವಿಭಾಗಗಳಿಗನುಸಾರವಾಗಿ ಹೆಸರನ್ನು ನೊಂದಾಯಿಸಿಕೊಂಡವರು. ಇಸ್ರೇಲರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ ರೂಬೇನ್ ಕುಲವು ಮತ್ತು ಅದರ ನಂತರದಲ್ಲಿರುವ ಎರಡು ಕುಲಗಳವರು ಎರಡನೆಯದಾಗಿ ಹೊರಡುವರು.

17 “ಇಸ್ರೇಲರು ಪ್ರಯಾಣಮಾಡುವಾಗ ಅವರ ನಂತರ ಹೊರಡುವ ತಂಡದವರೇ ಲೇವಿ ಕುಲದವರು. ಇತರ ಪಾಳೆಯಗಳ ಮಧ್ಯೆ ದೇವದರ್ಶನಗುಡಾರವು ಅವರೊಡನೆ ಇರುವುದು. ಅವರು ತಾವು ಪಾಳೆಯ ಮಾಡಿಕೊಂಡ ಕ್ರಮಾನುಸಾರವಾಗಿ ತಮ್ಮ ಧ್ವಜಗಳೊಡನೆ ಮುನ್ನಡೆಯುವರು.

18 “ಎಫ್ರಾಯೀಮ್ ಕುಲದವರು ಮತ್ತು ಅವರೊಡನೆ ಮುನ್ನಡೆಯುವ ಕುಲಗಳವರು ದೇವದರ್ಶನಗುಡಾರದ ಪಶ್ಚಿಮ ದಿಕ್ಕಿನಲ್ಲಿ ತಮ್ಮ ಧ್ವಜಗಳೊಡನೆ ವಿಭಾಗಗಳಿಗನುಸಾರವಾಗಿ ಪಾಳೆಯ ಮಾಡಬೇಕು. ಎಫ್ರಾಯೀಮ್ ಕುಲದವರ ನಾಯಕನು ಅಮ್ಮೀಹೂದನ ಮಗನಾದ ಎಲೀಷಾಮ. 19 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 40,500 ಮಂದಿ.

20 “ಮನಸ್ಸೆ ಕುಲದವರು ಎಫ್ರಾಯೀಮ್ ಕುಲದವರ ಪಕ್ಕದಲ್ಲಿ ಪಾಳೆಯ ಹಾಕುವರು. ಮನಸ್ಸೆ ಕುಲದವರ ನಾಯಕನು ಪೆದಾಚೂರನ ಮಗನಾದ ಗಮ್ಲೀಯೇಲ. 21 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 32,200 ಮಂದಿ.

22 “ಬೆನ್ಯಾಮೀನ್ ಕುಲವು ಸಹ ಎಫ್ರಾಯೀಮ್ ಕುಲದ ಪಕ್ಕದಲ್ಲಿ ಪಾಳೆಯ ಹಾಕುವರು. ಬೆನ್ಯಾಮೀನ್ ಕುಲದವರ ನಾಯಕನು ಗಿದ್ಯೋನನ ಮಗನಾದ ಅಬೀದಾನನು. 23 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 35,400 ಮಂದಿ.

24 “ಎಫ್ರಾಯೀಮ್ ಪಾಳೆಯದಲ್ಲಿರುವ ಸೈನಿಕರು 1,08,100 ಮಂದಿ. ಇವರೆಲ್ಲರು ತಮ್ಮ ವಿಭಾಗಗಳಿಗನುಸಾರವಾಗಿ ಹೆಸರನ್ನು ನೊಂದಾಯಿಸಿಕೊಂಡವರು. ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ ಎಫ್ರಾಯೀಮರ ಕುಲದವರು ಮತ್ತು ಅವರ ನಂತರದಲ್ಲಿರುವ ಎರಡು ಕುಲಗಳವರು ಮೂರನೆಯ ಗುಂಪಾಗಿ ಹೊರಡುವರು.

25 “ದಾನ್ ಕುಲದವರು ಮತ್ತು ಅವರೊಡನೆ ಮುನ್ನಡೆಯುವ ಕುಲಗಳು ದೇವದರ್ಶನಗುಡಾರದ ಉತ್ತರ ದಿಕ್ಕಿನಲ್ಲಿ ತಮ್ಮ ಧ್ವಜದೊಡನೆ ವಿಭಾಗಗಳಿಗನುಸಾರವಾಗಿ ಪಾಳೆಯ ಮಾಡಬೇಕು. ದಾನ್ ಕುಲದ ನಾಯಕನು ಅಮ್ಮೀಷದ್ದೈಯನ ಮಗನಾದ ಅಹೀಗೆಜೆರ್. 26 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 62,700 ಮಂದಿ.

27 “ಆಶೇರ್ ಕುಲದವರು ದಾನ್ ಕುಲದ ಪಕ್ಕದಲ್ಲಿ ಪಾಳೆಯ ಹಾಕಬೇಕು. ಆಶೇರ್ ಕುಲದವರ ನಾಯಕನು ಒಕ್ರಾನನ ಮಗನಾದ ಪಗೀಯೇಲ. 28 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 41,500 ಮಂದಿ.

29 “ನಫ್ತಾಲಿ ಕುಲದವರು ಸಹ ದಾನ್ ಕುಲದ ಪಕ್ಕದಲ್ಲಿ ಪಾಳೆಯ ಹಾಕಬೇಕು. ನಫ್ತಾಲಿ ಕುಲದವರ ನಾಯಕನು ಏನಾನನ ಮಗನಾದ ಅಹೀರ. 30 ಇವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 53,400 ಮಂದಿ.

31 “ದಾನ್ ಕುಲದ ಪಾಳೆಯದಲ್ಲಿರುವ ಲೆಕ್ಕಿಸಲ್ಪಟ್ಟ ಸೈನಿಕರು 1,57,600 ಮಂದಿ. ಇಸ್ರೇಲರು ಸ್ಥಳದಿಂದ ಸ್ಥಳಕ್ಕೆ ಪ್ರಯಾಣಮಾಡುವಾಗ ದಾನ್ ಕುಲದವರು ಮತ್ತು ಅವರೊಂದಿಗಿರುವ ಎರಡು ಕುಲಗಳವರು ಕೊನೆಯಲ್ಲಿ ತಮ್ಮ ಧ್ವಜಗಳೊಡನೆ ಮುನ್ನಡೆಯುವರು.”

32 ತಮ್ಮ ಕುಟುಂಬಗಳಿಗನುಸಾರವಾಗಿ ಹೆಸರನ್ನು ನೊಂದಾಯಿಸಿಕೊಂಡ ಇಸ್ರೇಲರು ಇವರೇ. ಅವರ ವಿಭಾಗಗಳಿಗನುಸಾರವಾಗಿ ಪಾಳೆಯದಲ್ಲಿ ಲೆಕ್ಕಿಸಲ್ಪಟ್ಟ ಇಸ್ರೇಲರ ಸೈನಿಕರ ಸಂಖ್ಯೆ 6,03,550 ಮಂದಿ. 33 ಯೆಹೋವನ ಆಜ್ಞೆಯ ಪ್ರಕಾರ ಮೋಶೆಯು ಲೇವಿಯರನ್ನು ಇತರ ಇಸ್ರೇಲರೊಂದಿಗೆ ಲೆಕ್ಕಿಸಲಿಲ್ಲ.

34 ಹೀಗೆ ಯೆಹೋವನು ಮೋಶೆಗೆ ಹೇಳಿದ ಪ್ರತಿಯೊಂದನ್ನು ಇಸ್ರೇಲರು ಮಾಡಿದರು. ತಮ್ಮ ಕ್ರಮಕ್ಕನುಸಾರವಾಗಿ ಅವರು ಪಾಳೆಯ ಮಾಡಿಕೊಂಡರು. ನೇಮಕವಾದ ಪ್ರಕಾರವೇ ಪ್ರಯಾಣ ಮಾಡುತ್ತಿದ್ದರು; ಪ್ರತಿಯೊಬ್ಬನು ತನ್ನ ಸ್ವಂತ ಕುಲದೊಡನೆಯೂ ಕುಟುಂಬದೊಡನೆಯೂ ಇದ್ದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International